ರಾಜಕೀಯ ಲಾಭಕ್ಕಾಗಿ ವೇದಿಕೆ ರಚನೆ

blm
Published on

ಕಾರ್ಕಳ: ಪರಶುರಾಮ ಹಿತರಕ್ಷಣಾ ಸಮಿತಿಯೋ ಅಥವಾ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ರಕ್ಷಣಾ ವೇದಿಕೆಯೋ ಎಂದು ಬೈಲೂರಿನ ಪರಶುರಾಮ ಥೀಂ ಪಾರ್ಕ್ ಜನಜಾಗೃತಿ ಸಮಿತಿಯ ಸಚ್ಚಿದನಾಂದ ಶೆಟ್ಟಿ ಪ್ರಶ್ನಿಸಿದ್ದಾರೆ.

ಪರಶುರಾಮ ಹಿತರಕ್ಷಣಾ ಸಮಿತಿ ವಿಸರ್ಜನೆ ಕುರಿತು ಪ್ರತಿಕ್ರಿಯಿಸಿರುವ ಅವರು ಸಮಿತಿಯ ನಿಜ ಬಣ್ಣ ಈಗ ಬಯಲಾಗಿದೆ. ಸಮಿತಿ ಪ್ರವಾಸೋದ್ಯಮ ಉಳಿವು, ಜನರ ಹಿತರಕ್ಷಣೆಗಾಗಿ ಅಸ್ತಿತ್ವಕ್ಕೆ ಬಾರದೆ ಇದರ ಅಸ್ತಿತ್ವವೂ ವಿಸರ್ಜನೆಯೂ ಉದಯ ಶೆಟ್ಟಿಯ ರಾಜಕೀಯ ಲಾಭಕ್ಕಾಗಿ ಹುಟ್ಟಿಕೊಂಡಿತ್ತು. ಕಾಂಗ್ರೆಸ್‌ನ ಮುಖವಾಣಿಯಾಗಿಯೇ ಅಂದಿನಿಂದ ಇಂದಿನವರೆಗೂ ಕೆಲಸ ವಾಡಿಕೊಂಡು ಬಂದಿತ್ತು ಎನ್ನುವ ಸತ್ಯ ಸಾರ್ವಜನಿಕವಾಗಿ ಬಹಿರಂಗಗೊಂಡಿದೆ ಎಂದು ಆರೋಪಿಸಿದರು.

ಪ್ರವಾಸೋದ್ಯಮವಾಗಿದ್ದ ಥೀಂ ಪಾರ್ಕ್ ಕಾಮಗಾರಿಗೆ ನಾನಾ ತರಹ ಅಡ್ಡಿ ಪಡಿಸಿ, ತಡೆದು ಕಳೆದೆರಡು ವರ್ಷ ನಾಟಕವಾಡಿ ಪ್ರವಾಸೋದ್ಯಮಕ್ಕೆ ನಷ್ಟ ವಾಡಿದರಲ್ಲ? ಆದ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಸಮಿತಿ ಹಾಗೂ ಕಾಂಗ್ರೆಸ್ ನಾಯಕ ಉದಯ ಶೆಟ್ಟಿಯೇ ನೇರ ಹೊಣೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net