ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ

Bhagappa Harijan
Published on

ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ್​ನನ್ನು ದುಷ್ಲರ್ಮಿಗಳ ಗುಂಪೊಂದು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ರೇಡಿಯೋ ಕೇಂದ್ರ ಬಳಿ ಇರುವ ಮದಿನಾ ನಗರದಲ್ಲಿ ನಡೆದಿದೆ.

ಭೀಮಾತೀರದ ನಟೋರಿಯಶ್ ಹಂತಕ ಚಂದಪ್ಪ ಹರಿಜನ್ ಶಿಷ್ಯ ಬಾಗಪ್ಪ ಹರಿಜನ್. ಕಲಬುರ್ಗಿ, ವಿಜಯಪುರದ ಭೀಮಾತೀರದಲ್ಲಿ ಹೆಚ್ಚು ಕುಖ್ಯಾತಿ ಪಡೆದಿದ್ದ ಭಾಗಪ್ಪ.

ಈ ಹಿಂದೆ ಕೋರ್ಟ್ ಆವರಣದಲ್ಲಿ ಭಾಗಪ್ಪನ ಮೇಲೆ ದಾಳಿ ನಡೆದಿತ್ತು. ಇದೀಗ ದುಷ್ಕರ್ಮಿಗಳ ಗುಂಪು ಆತನ ಮನೆ ಮುಂದೆಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ್​ ನಿಂಬರಗಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net