ಕೃತಕ ಬುದ್ಧಿಮತ್ತೆಯಿಂದ ಉತ್ತಮ ಕೆಲಸ

nitte
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಕೃತಕ ಬುದ್ಧಿಮತ್ತೆ ನಮ್ಮ ಉದ್ಯೋಗ ಕಸಿದುಕೊಳ್ಳುವುದಿಲ್ಲ. ಬದಲಿಗೆ ಅದನ್ನು ಕಲಿಯುವುದರಿಂದ ನಮ್ಮ ಕೆಲಸ ಇನ್ನೂ ಉತ್ತಮವಾಗಿ ಸುಲಭವಾಗಿಸಬಹುದು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಗೋಪಾಲ್ ಮುಗೆರಾಯ ಹೇಳಿದರು.

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ವೆನಮಿತಾದ ಸಹಯೋಗದೊಂದಿಗೆ ಆಯೋಜಿಸಿದ್ದ ಎಂಸಿಎ ಎಕ್ಸ್‌ಪೋ-24 ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಪ್ರಾಜೆಕ್ಟ್ ಅಗತ್ಯತೆ ಮತ್ತು ಅದರ ಪ್ರಯೋಜನವನ್ನು ವಿವರಿಸಿದರು. ಟೈಟೊ ಎವ್ರಿ ಇಂಡಿಯಾದ ಟೀಮ್ ಲೀಡ್ ರಚನಾ ಮಿಥುನ್, ಐ ಡ್ರೈವ್‌ನಲ್ಲಿ ಪ್ರೋಗ್ರಾಂ ಎನಾಲಿಸ್ಟ್‌ನ ಹೆರೋಲಿನ್ ವಾಝ್, ರೋಬೋಸಾಫ್ಟ್ ಟೆಕ್ನಾಲಜೀಸ್ ಸಾಫ್ಟ್‌ವೇರ್ ಇಂಜಿನಿಯರ್ ಜೀಟಾ ಅಂದ್ರಾದೆ, ಸ್ಕೈಲ್ರಾ ಕಂಪನಿಯ ಪ್ರಣೀತಾ ಜೆ. ಶೆಟ್ಟಿ, ಪೇಚೆಕ್ಸ್ ಸಾಫ್ಟವೇರ್ ಇಂಜಿನಿಯರ್ ಡೆನ್ಸನ್ ಮಸ್ಕರೇನಸ್, ಡಾ. ಕರುಣಾ ಪಂಡಿತ್, ಡಾ. ಸಾರಿಕಾ ಹೆಗ್ಡೆ ಉಪಸ್ಥಿತರಿದ್ದರು. ಎಂಸಿಎ ಮುಖ್ಯಸ್ಥೆ ಡಾ.ಮಮತಾ ಬಲಿಪ ಸ್ವಾಗತಿಸಿದರು. ಡಾ. ಸ್ಫೂರ್ತಿ ಶೆಟ್ಟಿ ವಂದಿಸಿದರು. ವಿಶ್ವರೂಪ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net