

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಸರ್ವಧರ್ಮ ಸಮನ್ವಯದ ಜತೆಗೆ ಇತಿಹಾಸ ಉಳಿಸಿ ರಕ್ಷಿಸುವಲ್ಲಿ ಇಂದಿನ ಯುವ ಸಮುದಾಯ ಕೆಲಸ ಮಾಡಬೇಕಾಗಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಇಂತಹ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೂಡಬಿದಿರೆ ಜೈನಕಾಶಿ ಮಠಾಧಿಪತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪ್ರಾಚ್ಯ ತೌಳವ ಕರ್ಣಾಟ-ಪರಂಪರೆ ಉಳಿಸಿ ಜಾಗೃತಿ ಅಭಿಯಾನದಡಿ ಹೆಬ್ರಿ ತಾಲೂಕಿನ ಚಾರಬಸದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಜಿಲ್ಲೆ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ, ಯೋಜನಾಧಿಕಾರಿ ಬಾಲರಾಜ್ ಡಿ.ಬಿ., ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಕೆ ಕೃಷ್ಣಯ್ಯ, ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮಾಜಿ ಅಧ್ಯಯನ ಪೀಠ ನಿರ್ದೇಶಕ ಡಾ.ಜಿ.ವಿ.ಕಲ್ಲಾಪುರ, ಉಪನಿರ್ದೇಶಕ ಶ್ರುತೇಶ್ ಆಚಾರ್ಯ, ಡಾ.ಗಣೇಶ್ ಪ್ರಸಾದ್ ಜಿ., ಪುರಾತತ್ವ ಉತ್ಕನನ ವಿಭಾಗದ ಡಾ.ಎಸ್.ಜಿ ಸಾಮಾಕ್, ಪುನೀತ್, ಸ್ಥಳೀಯರಾದ ವಾದಿರಾಜ ಶೆಟ್ಟಿ, ವಸಂತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.