ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಉಪನ್ಯಾಸ

siddi
Published on

ಗಂಗೊಳ್ಳಿ : ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಲೋಕಮಾತೆದೇವಿ ಅಹಲ್ಯಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ರಾಷ್ಟ್ರಸೇವಿಕಾ ಸಮಿತಿಸಂಸ್ಕಾರ ಪರಿವೀಕ್ಷಣಾ ಪ್ರಮುಖ್ ಮೀನಾಕ್ಷಿ ಭಗಿನೀ ವಿಶೇಷ ಉಪನ್ಯಾಸ ನೀಡಿದರು. ಅಹಲ್ಯಬಾಯಿ ಅವರ ಹೋರಾಟಮಯ ಜೀವನವನ್ನು ತೆರೆದಿಟ್ಟ ಅವರು ವಿದ್ಯಾರ್ಥಿಗಳಿಗೆ ಮಾತೆ ಅಹಲ್ಯಬಾಯಿ ಅವರ ಜೀವನ ಪ್ರಪಂಚದ ಎಲ್ಲ ಸ್ತ್ರೀಯರಿಗೂ ಸ್ಫೂರ್ತಿ ತುಂಬುವಂತದ್ದು. ಅವರ ಪೂರ್ತಿಜೀವನ ಹೋರಾಟದಿಂದ ಕೂಡಿತ್ತು. ತಮ್ಮ ಆಳ್ವಿಕೆಯ ಅವಧಿಯಲ್ಲಿ ಉತ್ತಮ ಆಡಳಿತವನ್ನು ನೀಡಿ, ಹಲವಾರು ಮಠ ಮಂದಿರಗಳನ್ನು ಪುನರುಜ್ಜಿವನಗೊಳಿಸುವಲ್ಲಿ ಬಹುವಾಗಿ ಶ್ರಮಿಸಿ, ಸಮಾಜಕ್ಕೆ ಉತ್ತಮ ತತ್ವಬೋಧನೆಗಳನ್ನು ನೀಡಿದ್ದರು ಎಂದರು.

ಉಡುಪಿ ಜಿಲ್ಲೆಯ ರಾಷ್ಟ್ರಸೇವಿಕಾ ಸಮಿತಿಯ ಸೇವಾ ಪ್ರಮುಖ ಕಲ್ಪನಾ ಭಾಸ್ಕರ್, ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಸಹಶಿಕ್ಷಕಿ ಶಶಿಕಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net