ಕಾಫಿ ಎಸ್ಟೇಟ್​ನಲ್ಲಿ ಕಾಡುಕೋಣಗಳ ಹಿಂಡು; ಒಂದೇ ಕಡೆ 50ಕ್ಕೂ ಹೆಚ್ಚು ಕಾಡುಕೋಣಗಳು..

Bison
Published on

ಚಿಕ್ಕಮಗಳೂರು: ಆನೆಗಳ ಹಿಂಡು, ಚಿರತೆ, ಕರಡಿ ಕಾಡಿನಿಂದ ನಾಡಿಗೆ ಬಂದು ಹಾವಳಿ ಇಡುತ್ತಿರುವ ಪ್ರಕರಣಗಳ ನಡುವೆ ಇದೀಗ ಕಾಡುಕೋಣಗಳ ಹಿಂಡು ಕಾಫಿ ಎಸ್ಟೇಟ್​ವೊಂದರಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭೂತನಕಾಡು ಎಂಬಲ್ಲಿನ ಕಾಫಿ ಎಸ್ಟೇಟ್​ನಲ್ಲಿ ಈ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದೆ. ಒಂದೇ ಕಡೆಯಲ್ಲಿ ಸುಮಾರು 50 ಕಾಡುಕೋಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ.

ಸಿದ್ದಗಂಗಾ ಕಾಫಿ ಎಸ್ಟೇಟ್​ನಲ್ಲಿ ಕಾಣಿಸಿಕೊಂಡ ಕಾಡುಕೋಣಗಳಿಂದಾಗಿ ಕಾರ್ಮಿಕರು ಆತಂಕಗೊಂಡಿದ್ದಾರೆ. ಮಾತ್ರವಲ್ಲ ಕಾಡುಕೋಣಗಳ ಓಡಾಟದಿಂದ ತೋಟದಲ್ಲಿ ಕಾಫಿ ಹಾಗೂ ಮೆಣಸು ಬೆಳೆಗಳಿಗೆ ಹಾನಿಯಾಗಿವೆ. ಅವುಗಳನ್ನು ಕಾಡಿಗೆ ಮರಳಿಸುವ ಪ್ರಯತ್ನಗಳೂ ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net