ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Application-1-1280x720
Published on

ಗೋಳಿಯಂಗಡಿ: ಉಡುಪಿ ಜಿಲ್ಲೆ ಕುಡುಬಿ ಸಮಾಜೋದ್ಧಾರಕ ಸಂಘ, ಕುಡುಬಿ ಶಿಕ್ಷಣ ಸಮಿತಿ ಸಹಯೋಗದೊಂದಿಗೆ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.70ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿ ತೇರ್ಗಡೆಯಾದ ಉಡುಪಿ ಜಿಲ್ಲೆ ಕುಡುಬಿ ವಿದ್ಯಾರ್ಥಿಗಳಿಗೆ ಕುಡುಬಿ ಸಮಾಜೋದ್ಧಾರಕ ಸಂಘದ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲಾತಿಗಳು: ಭರ್ತಿ ಮಾಡಿದ ಅರ್ಜಿ, 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ/ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ಅಂಕ ಪಟ್ಟಿಯ ಒಂದು ಜೆರಾಕ್ಸ್ ಪ್ರತಿ, ಪ್ರಸ್ತುತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ ಶುಲ್ಕ ಪಾವತಿ ರಶೀದಿ, ವಿದ್ಯಾರ್ಥಿಯ ಒಂದು ಭಾವಚಿತ್ರ. ಅರ್ಜಿ ಸಲ್ಲಿಸಲು 20.10.2025ರ ತನಕ ಶ್ರೀಮಲ್ಲಿಕಾರ್ಜುನ ಸಮುದಾಯ ಭವನ ಆಮ್ರಕಲ್ಲು ಕಚೇರಿಯಲ್ಲಿ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net