ಬ್ರಹ್ಮಾವರ: ಮೂಡುಕೇರಿ ಬಾರಕೂರು ಶ್ರೀ ವೇಣುಗೋಪಾಲಕೃಷ್ಣ ಎಜುಕೇಶನಲ್ ಸೊಸೈಟಿ ವತಿಯಿಂದ ಪ್ರೇರಣ- 2024 ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಬಾರಕೂರಿನಲ್ಲಿ ಭಾನುವಾರ ನಡೆಯಿತು.
ಶ್ರೀ ವೇಣುಗೋಪಾಲಕೃಷ್ಣ ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಚಲ್ಲೆಮಕ್ಕಿ ಅವರನ್ನು ಸನ್ಮಾನಿಸಲಾಯಿತು. ರಾಜೇಂದ್ರ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ದುಬೈಯ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಅರುಣ್ ವಿ., ಉದ್ಯಮಿ ಗಣೇಶ್ ರಾವ್, ಸೂರ್ಯನಾರಾಯಣ ಗಾಣಿಗ, ಡಾ.ಸ್ಫೂರ್ತಿ, ಸತೀಶ್ ಗಾಣಿಗ, ರವಿರಾಜ್ ಕುಂಭಾಶಿ, ವಿಜಯ್, ಉದಯ ಕುಮಾರ್, ಜಯಂತಿ ವಾಸುದೇವ್, ಮಾಲತಿ ದಿನೇಶ್, ಗೋಪಾಲ ಕೃಷ್ಣ, ನಾರಾಯಣ ಉಪಸ್ಥಿತರಿದ್ದರು.