ಸರ್ಕಾರಿ ಹುದ್ದೆಗಳತ್ತ ಬಿಲ್ಲವರ ಚಿತ್ತ

billava
ಬೆಳ್ವೆ ನಾರಾಯಣಗುರು ಬಿಲ್ಲವ ಸೇವಾ ಸಂಘ ಆಯೋಜಿಸಿದ್ದ ಗುರುಪೂಜೆ ಕಾರ್ಯಕ್ರಮದಲ್ಲಿ ರಾಜು ಪೂಜಾರಿ ಸಹಿತ ಸಾಧಕರನ್ನು ಸನ್ಮಾನಿಸಲಾಯಿತು
Published on

ಆರ್ಡಿ: ನಾಲ್ಕು ಜಿಲ್ಲೆಗಳಲ್ಲಿ ಬಿಲ್ಲವರೇ ಅತಿ ಹೆಚ್ಚಿದ್ದರೂ ಸರ್ಕಾರಿ ಹುದ್ದೆಗಳಲ್ಲಿ ಅತಿ ಕಡಿಮೆ ಮಂದಿ ಬಿಲ್ಲವ ಸಮುದಾಯದವರಿದ್ದಾರೆ. ಈ ನಿಟ್ಟಿನಲ್ಲಿ ಸಮುದಾಯದ ಯುವಜನರು ಹೆಚ್ಚಿನ ಶ್ರಮ ವಹಿಸಬೇಕು ಎಂದು ಕುಂದಾಪುರ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಜೀವ ಪೂಜಾರಿ ಬೀಜಾಡಿ ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜನ್ಮದಿನಾಚರಣೆ ಪ್ರಯುಕ್ತ ಆರ್ಡಿ ಸಮೀಪದ ಕೆರ್ಜಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬೆಳ್ವೆ ನಾರಾಯಣಗುರು ಬಿಲ್ಲವ ಸೇವಾ ಸಂಘ ಭಾನುವಾರ ಆಯೋಜಿಸಿದ್ದ ಗುರುಪೂಜೆ, ಸಭಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದರ್ಶನ ಗರ್ತಿಕೆರೆ ನಾರಾಯಣಗುರುಗಳ ಕುರಿತು ಸಂದೇಶ ನೀಡಿದರು. ರಾಜು ಪೂಜಾರಿ ತೊಂಬತ್ತು, ಕೆರ್ಜಾಡಿ ಗರಡಿ ಪ್ರಧಾನ ಅರ್ಚಕ ದಯಾನಂದ ಪೂಜಾರಿ, ಶೇಡಿಮನೆ ಚಕ್ಕರ್‌ಮಕ್ಕಿ ಡಾ.ಸನ್ನಿಧಿ ಎಸ್. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರಮುಖರಾದ ವಿ.ಸುರೇಶ್ ಪೂಜಾರಿ, ಉದಯ ಪೂಜಾರಿ, ಶಂಕರ ಪೂಜಾರಿ ಅರಸಮ್ಮಕಾನು, ದಯಾನಂದ ಪೂಜಾರಿ ಉಪಸ್ಥಿತರಿದ್ದರು. ಪ್ರವೀಣ ಪೂಜಾರಿ ಸ್ವಾಗತಿಸಿದರು. ಸುಧಾಕರ ಪೂಜಾರಿ ವಂದಿಸಿದರು. ಪಲ್ಲವಿ ಸನ್ಮಾನ ಪತ್ರ ವಾಚಿಸಿದರು. ಸಂತೋಷಕುಮಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net