ಪ್ರೇಕ್ಷಕರ ಮೆಚ್ಚುಗೆ ಗಳಿಸಿದ 'ಹಾಸ್ಯಮೇಳ'; ಅಂತರಂಗ ಹವ್ಯಾಸಿ ತಂಡದಿಂದ ಆಯೋಜನೆ

Drama Team
Published on

ಬೆಂಗಳೂರು: ಕನ್ನಡ ಮತ್ತು ಸಂಸತಿ ಇಲಾಖೆ ಸಹಕಾರದೊಂದಿಗೆ ಅಂತರಂಗ ಹವ್ಯಾಸಿ ನಾಟಕ ತಂಡ ಜಯನಗರದ ನ್ಯಾಷನಲ್​ ಕಾಲೇಜಿನ ಎಚ್​.ಎನ್​.ಕಲಾಕ್ಷೇತ್ರದಲ್ಲಿ ಕಳೆದ ಭಾನುವಾರ ಆಯೋಜಿಸಿದ್ದ 24ನೇ ವರ್ಷದ 'ಹಾಸ್ಯಮೇಳ' ಸಂಪನ್ನವಾಗಿದೆ.

'ನಗೆ ಸುಗ್ಗಿ-ಹುಗ್ಗಿ' ಕಲ್ಪನೆಯಲ್ಲಿ ನಡೆದ ವಿವಿಧ ಹಾಸ್ಯಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು. ಎಂ.ಎಸ್​.ನರಸಿಂಹಮೂರ್ತಿ, ಗಂಗಾವತಿ ಪ್ರಾಣೇಶ್​, ವೈವಿ.ಗುಂಡೂರಾವ್​, ರವಿ ಭಜಂತ್ರಿ, ಅಚ್ಯುತರಾವ್​ ಪದಕಿ ಅವರಿಂದ 'ಹಾಸ್ಯ ರಸಾಯನ' ನಡೆಯಿತು.

ಚಾಮರಾಜನಗರದ ನರಸಿಂಹಮೂರ್ತಿ ಮತ್ತು ತಂಡದಿಂದ 'ಜನಪದದಲ್ಲಿ ಹಾಸ್ಯ', ವಿಜಯನಗರ ಬಿಂಬ ತಂಡದಿಂದ 'ನಾವು ಪೌರರು' ಪ್ರಹಸನ, ರಾಧಾಕೃಷ್ಣ ಉರಾಳ ಮತ್ತು ತಂಡದಿಂದ 'ಯಕ್ಷಗಾನದಲ್ಲಿ ಹಾಸ್ಯ' ಪ್ರದರ್ಶನ, ಕನ್ನರ್ಪಾಡಿ ರಾಮಕೃಷ್ಣ ಅವರಿಂದ ಮೈಮ್​ನಲ್ಲಿ ಹಾಸ್ಯ, ರಾಮನಾಥ್​ ಹಾಗೂ ನಟರಾಜ್​ ಅವರಿಂದ 'ಅಣಕು ಹಾಡುಗಳು', ನಾರಾಯಣ ಭಟ್​ ಅವರಿಂದ ನಡೆದ ಜಾದೂ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್​.ಷಡಕ್ಷರಿ ಉದ್ಘಾಟಿಸಿದರು. ಅಂತರಂಗ ಹವ್ಯಾಸಿ ನಾಟಕ ತಂಡದ ಕಾರ್ಯದರ್ಶಿ ಅಂಕಲ್​ ಶ್ಯಾಮ್​, ಸಂಚಾಲಕರಾದ ರಾಮ್​ದೇವ್​, ಮುರಳೀಧರ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net