More

    ಗೃಹಪ್ರವೇಶಕ್ಕೂ ಮುನ್ನವೇ ಅಡಿಪಾಯ ಸಮೇತ ಧರೆಗುರುಳಿದ 3 ಅಂತಸ್ತಿನ ಕಟ್ಟಡ: ಕ್ಯಾಮೆರಾ ಕಣ್ಣಲ್ಲಿ ಭೀಕರ ದೃಶ್ಯ ಸೆರೆ

    ಪುದುಚೇರಿ: ಹೊಸದಾಗಿ ನಿರ್ಮಾಣ ಮಾಡಿದ ಮೂರು ಅಂತಸ್ತಿನ ಕಟ್ಟಡ ಗೃಹಪ್ರವೇಶಕ್ಕೂ ಮುನ್ನವೇ ಅಡಿಪಾಯ ಸಮೇತ ಕುಸಿದು ಬಿದ್ದ ಆಘಾತಕಾರಿ ಘಟನೆ ಪುದುಚೇರಿಯ ಅಟ್ಟುಪಟ್ಟಿಯಲ್ಲಿರುವ ಅಂಬೇಡ್ಕರ್​ ನಗರದಲ್ಲಿ ನಡೆದಿದೆ.

    ಮೂಲಗಳ ಪ್ರಕಾರ ಗ್ರಾಮದಲ್ಲಿ ಹಾದು ಹೋಗಿರುವ ಒಳಚರಂಡಿ ಕಾಲುವೆಯ ನವೀಕರಣದ ಅಂಗವಾಗಿ ಮಣ್ಣು ತೆಗೆಯುವ ಯಂತ್ರ ಬಳಸಿ ಹಳ್ಳ ತೋಡಿದ್ದರಿಂದ ಮನೆ ಕುಸಿದಿದೆ ಎಂದು ತಿಳಿದುಬಂದಿದೆ.

    ರಾಜಕಾಲುವೆಯ ದಡದಲ್ಲಿ ಸರ್ಕಾರ ಮಂಜೂರು ಮಾಡಿದ ಜಾಗದಲ್ಲಿ ಕೆಲವು ಮನೆಗಳನ್ನು ನಿರ್ಮಿಸಲಾಗಿತ್ತು. ಕಾಲುವೆ ನವೀಕರಣಕ್ಕೆ ಮಣ್ಣು ತೆಗೆಯುವ ಯಂತ್ರವನ್ನು ಬಳಸಿದ ನಂತರ ಆ ಏರಿಯಾದಲ್ಲಿ ಭಾರೀ ಕಂಪನದ ಅನುಭವವಾಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮರೈಮಲೈ ಅಡಿಗಲ್ ಸಲೈ ಮತ್ತು ಕಾಮರಾಜ್ ಸಾಲೈಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಭಾಗವಾಗಿ ಕಾಲುವೆ ಬಳಿ ಪಿಡಬ್ಲ್ಯೂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಅಪಘಾತದ ವೇಳೆ ಮನೆ ಮತ್ತು ಸುತ್ತಮುತ್ತ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುದುಚೇರಿಯ ಲೋಕೋಪಯೋಗಿ ಇಲಾಖೆ ಸಚಿವ ಕೆ.ಲಕ್ಷ್ಮೀನಾರಾಯಣ್ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ಕುರಿತು ಪಿಡಬ್ಲ್ಯುಡಿ ಮತ್ತು ಕಂದಾಯ ಇಲಾಖೆ ವರದಿ ಸಲ್ಲಿಸಲಿದೆ. ಶೀಘ್ರವೇ ವಿಚಾರಣೆ ನಡೆಸಲಾಗುವುದು. ಮನೆ ಮಾಲೀಕರಿಗೆ ಪರಿಹಾರ ನೀಡುವ ಕುರಿತು ಸರಕಾರ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದರು.

    ಈ ಮಧ್ಯೆ ಎಐಎಡಿಎಂಕೆ ಪಕ್ಷವು ಘಟನಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದು, ಮನೆಯ ಮಾಲೀಕರಿಗೆ ಸರ್ಕಾರವು ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದೆ. ಗುತ್ತಿಗೆದಾರರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ ಎಐಎಡಿಎಂಕೆ ಮುಖಂಡರು, ಪಿಡಬ್ಲ್ಯುಡಿ ಹೊಣೆಗಾರಿಕೆ ವಹಿಸಬೇಕು ಎಂದು ಆಗ್ರಹಿಸಿದರು. (ಏಜೆನ್ಸೀಸ್​)

    ಪ್ರಧಾನಿ ಮೋದಿ 11 ದಿನ ಉಪವಾಸ ಮಾಡಿದ್ದೇ ಅನುಮಾನ : ಮಾಜಿ ಸಿಎಂ ಮೊಯ್ಲಿ ಆಕ್ರೋಶ

    ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಹನುಮಂತ ಪಾತ್ರಧಾರಿ ಮೃತ್ಯು

    30 ವರ್ಷಗಳ ನಂತರ ಫಿಟ್, ಯಂಗ್ ಆಗಿ ಕಾಣಬೇಕೆಂದರೆ ಹೀಗೆ ಮಾಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts