30 ವರ್ಷಗಳ ನಂತರ ಫಿಟ್, ಯಂಗ್ ಆಗಿ ಕಾಣಬೇಕೆಂದರೆ ಹೀಗೆ ಮಾಡಿ..

fit
Published on

ಬೆಂಗಳೂರು:  ಕಳಪೆ ಜೀವನಶೈಲಿ, ಆಹಾರ, ಇವೆಲ್ಲವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದಾಗ್ಯೂ, ಮಹಿಳೆಯರು ಮತ್ತು ಪುರುಷರು ವಯಸ್ಸಾದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. 30ರ ನಂತರ ದೇಹ ಸಂಪೂರ್ಣ ನಿರ್ಜೀವವಾಗುತ್ತದೆ. ದೇಹವನ್ನು ಸದಾ ಫಿಟ್ ಆಗಿಟ್ಟುಕೊಳ್ಳಲು ಆಹಾರದ ವಿಚಾರದಲ್ಲಿ ಮೊದಲೇ ಕಾಳಜಿ ವಹಿಸಬೇಕು.

1) ಪ್ರತಿದಿನ ಬೆಳಿಗ್ಗೆ ಡ್ರೈಫ್ರೂಟ್ಸ್​​ ಸೇವಿಸುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ಸೇವಿಸುವುದರಿಂದ ನಿಮ್ಮ ದೇಹವು ತುಂಬಾ ಸದೃಢವಾಗಿರುತ್ತದೆ.

2) ರೋಗಗಳನ್ನು ತಡೆಗಟ್ಟಲು ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸಬೇಕು. ಆಂಟಿಸೆಪ್ಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಜೇನುತುಪ್ಪದಲ್ಲಿವೆ.

3) ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಬೇಕು. ರೋಗಗಳನ್ನು ದೂರವಿಡುವುದು ಬಹಳ ವಿಶೇಷ. ಬೆಳ್ಳುಳ್ಳಿ ದೇಹದಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

4) ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ನಿಮ್ಮ ಆಹಾರ ಪದ್ಧತಿಗೆ ವಿಶೇಷ ಗಮನ ನೀಡಬೇಕು. ನಿಮ್ಮ ದೈನಂದಿನ ಆಹಾರದಲ್ಲಿ ಬ್ರೊಕೊಲಿಯನ್ನು ಸೇರಿಸುವ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು. ಬ್ರೊಕೊಲಿಯಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಲು ತಜ್ಞರು ಸಲಹೆ ನೀಡುತ್ತಾರೆ.

5) ನಿಮಗೆ ಇಷ್ಟವಾದ ಹಣ್ಣುಗಳನ್ನು ಮಾರುಕಟ್ಟೆಯಿಂದ ತಂದು ಜ್ಯೂಸ್​​ ಮಾಡಿ ಸೇವಿಸಿ. ನಿಮ್ಮ ದೇಹಕ್ಕೆ ಶಕ್ತಿ ನೀಡುವುದರ ಜತೆಗೆ ಚರ್ಚಮ ಆರೋಗ್ಯಕ್ಕೂ ಒಳ್ಳೆಯದಾಗಿದೆ.

6) ಕ್ಯಾರೆಟ್​​, ಟಮ್ಯಾಟೋ, ಸೌತೆಕಾಯಿ ಸೇವಿಸುತ್ತಿರಿ.

7) ತರಕಾರಿ, ಸೊಪ್ಪು ಜತೆಗೆ ಮೀನು, ಮಾಂಸಗಳನ್ನು ಸೇವನೆ ಮಾಡಿ. ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ನೀಡುವುದರ ಜತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net