ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಹನುಮಂತ ಪಾತ್ರಧಾರಿ ಮೃತ್ಯು

ರಾಮಲೀಲ ನಾಟಕ
Published on

ಹರಿಯಾಣ: ರಾಮಲೀಲಾ ನಾಟಕ ಪ್ರದರ್ಶನ ಮಾಡುತ್ತಿದ್ದ ವೇಳೆ ಹನುಮನ ಪಾತ್ರ ಮಾಡುತ್ತಿರುವ ವ್ಯಕ್ತಿ ವೇದಿಕೆಯ ಮೇಲೆ ಹೃದಯಾಘಾತಗೊಂಡು ಮೃತಪಟ್ಟಿರುವ ಘಟನೆ ಹರಿಯಾಣದ ಭೀಮನಿಯಲ್ಲಿ ನಡೆದಿದೆ.

ಹರೀಶ್​ ಮೆಹ್ತಾ ಮೃತ ದುರ್ದೈವಿ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೌರಾಣಿಕ ರಾಮಲೀಲಾ ನಾಟಕ ಆಯೋಜಿಸಲಾಗಿತ್ತು. ಈ ವೇಳೆ ದುರಂತ ಘಟನೆ ಸಂಭವಿಸಿದೆ.

ಭಿವಾನಿಯ ಜವಾಹರ್ ಚೌಕ್​ ಸ್ಥಳದಲ್ಲಿ ರಾಮನ ಮೇಲಿನ ಭಕ್ತಿಯಿಂದ ರಾಜ್​ ತಿಲಕ್​ ಎಂಬ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮೃತ ಹರೀಶ್ ರಾಮನ ಪಾದಗಳಿಗೆ ನಮಸ್ಕರಿಸಬೇಕಿತ್ತು. ಆ ಸಮಯದಲ್ಲಿ ಹೃದಯಾಘಾತವಾಗಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ಸನ್ನಿವೇಶವನ್ನು ನಾಟಕದ ಭಾಗವಾಗಿರಬಹುದು ಎಂದುಕೊಂಡಿದ್ದರು. ಆದರೆ ವೇದಿಕೆ ಮೇಲಿದ್ದ ಇತರೆ ಪಾತ್ರಧಾರಿಗಳು ಕೂಡಲೇ ಹರೀಶ್​ ಅವರನ್ನು ಎತ್ತುವಾಗಲೇ ಗೊತ್ತಾಗಿದ್ದು ಇದು ನಾಟಕವಲ್ಲ ಎಂದು.

ಈ ಕೂಡಲೇ ಹರೀಶ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟೊತ್ತಿಗಾಗಲೇ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹರೀಶ್ ವಿದ್ಯುತ್ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ವೃತ್ತಿಯಿಂದ ನಿವೃತ್ತರಾಗಿದ್ದರು. ಕಳೆದ 25 ವರ್ಷಗಳಿಂದ ಹನುಮಂತನ ಪಾತ್ರ ಮಾಡಿ ಅಪಾರ ಜನಮನ್ನಣೆಗಳಿಸಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net