More

    ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಸಿಗಲಿ: ಎಲಾನ್ ಮಸ್ಕ್ ಕಿವಿಮಾತು

    ನ್ಯಾಯಾರ್ಕ್​: ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಆಗಿಲ್ಲದಿರುವುದು ಅಸಂಬದ್ಧವಾಗಿದೆ ಎಂದು ಉದ್ಯಮಿ ಎಲಾನ್ ಮಸ್ಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:ಭಾರತ್ ಜೋಡೋ ನ್ಯಾಯ ಯಾತ್ರೆಗೆ ಪೊಲೀಸರಿಂದ ತಡೆ: ಬಿಜೆಪಿ, ಕಾಂಗ್ರೆಸ್​ ನಡುವೆ ಮುಗಿಯದ ಜಟಾಪಟಿ

    ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಅರ್ಹತೆ ಹೊಂದಿದೆ ಎಂದಿರುವ ಎಲಾನ್ ಮಸ್ಕ್. ವಿಶ್ವಸಂಸ್ಥೆಯ ಸಹ ಸಂಸ್ಥೆಗಳ ಸ್ವರೂಪವನ್ನು ಪರಿಷ್ಕರಣೆ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ. ಭದ್ರತಾ ಮಂಡಳಿಯಲ್ಲಿ ಆಫ್ರಿಕಾದ ರಾಷ್ಟ್ರಗಳು ಒಂದು ಸ್ಥಾನವೂ ಪಡೆಯದಿರವುದರ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್​ ಕಳವಳ ವ್ಯಕ್ತಪಡಿಸಿದ್ದಾರೆ.

    ಭೂಮಿಯ ಮೇಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಭಾರತವನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಅಸಂಬದ್ಧವಾಗಿದೆ. ಆಫ್ರಿಕಾ ಒಟ್ಟಾಗಿ ಶಾಶ್ವತ ಸ್ಥಾನವನ್ನು ಹೊಂದಿರಬೇಕು ಎಂದು ಸೂಕ್ಷ್ಮವಾಗಿ ಅವರು ಹೆಳಿದರು.

    ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಆಫ್ರಿಕಾಕ್ಕೆ ಇನ್ನೂ ಒಂದು ಖಾಯಂ ಸದಸ್ಯತ್ವ ಕೊಡದಿರುವುದನ್ನು ನಾವು ಹೇಗೆ ಒಪ್ಪಿಕೊಳ್ಳಬೇಕು.? ಯುಎನ್ ಅಂಗ​ ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು. 80 ವರ್ಷಗಳ ಹಿಂದೆ ಇದ್ದಂತೆ ಆಗಬಾರದು. ಸೆಪ್ಟೆಂಬರ್‌ನ ಭವಿಷ್ಯದ ಶೃಂಗಸಭೆಯು ಜಾಗತಿಕ ಆಡಳಿತ ಸುಧಾರಣೆಗಳನ್ನು ಪರಿಗಣಿಸಲು ಮತ್ತು ನಂಬಿಕೆಯನ್ನು ಮರು ನಿರ್ಮಿಸಲು ಒಂದು ಅವಕಾಶವಾಗಿದೆ ಗುಟೆರಸ್ ಅವರು ಜನವರಿ 21 ರಂದು ತಮ್ಮ ಪೋಸ್ಟ್‌ ಒಂದರಲ್ಲಿ ಹೇಳಿದ್ದಾರೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಶಾಶ್ವತ ಸದಸ್ಯತ್ವಕ್ಕೆ ಜಾಗತಿಕ ಬೆಂಬಲ ಹೆಚ್ಚುತ್ತಿರುವ ಬಗ್ಗೆ ಒತ್ತು ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೆಲವೊಮ್ಮೆ ವಿಷಯಗಳನ್ನು ಉದಾರವಾಗಿ ನೀಡಲಾಗುವುದಿಲ್ಲ ಮತ್ತು ಅದನ್ನು ವಶಪಡಿಸಿಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐದು ಖಾಯಂ ಸದಸ್ಯರನ್ನು ಹೊಂದಿದೆ. ಚೀನಾ, ಫ್ರಾನ್ಸ್​, ರಷ್ಯಾ, ಅಮೆರಿಕಾ ಮತ್ತು ಇಂಗ್ಲೆಂಡ್​. ಈ 5 ರಾಷ್ಟ್ರಗಳು ವಿಟೋ ಅಧಿಕಾರ ಹೊಂದಿದೆ.

    ಕಂಗನಾ ಅಭಿನಯದ ಬಹುನಿರೀಕ್ಷಿತ ‘ಎಮರ್ಜೆನ್ಸಿ’ ರಿಲೀಸ್ ಡೇಟ್ ಫಿಕ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts