More

    ಭಾರತ್ ಜೋಡೋ ನ್ಯಾಯ ಯಾತ್ರೆಗೆ ಪೊಲೀಸರಿಂದ ತಡೆ: ಬಿಜೆಪಿ, ಕಾಂಗ್ರೆಸ್​ ನಡುವೆ ಮುಗಿಯದ ಜಟಾಪಟಿ

    ಗುವಾಹಟಿ: ಅಸ್ಸಾಂನಲ್ಲಿ ಕಾಂಗ್ರೆಸ್, ಬಿಜೆಪಿ ಸರ್ಕಾರದ ನಡುವೆ ನಡೆಯುತ್ತಿರುವ ಜಟಾಪಟಿ ಮತ್ತಷ್ಟು ಹೆಚ್ಚಾಗಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಸುಮಾರು 5,000 ಕಾಂಗ್ರೆಸ್ ಕಾರ್ಯಕರ್ತರು ಏಕಕಾಲಕ್ಕೆ ನಗರ ಪ್ರವೇಶ ಮಾಡುವುದರಿಂದ ಗುವಾಹಟಿಯಲ್ಲಿ ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿದೆ. ಗುವಾಹಟಿಯ ಮುಖ್ಯ ರಸ್ತೆಯಲ್ಲಿ ಚಲಿಸಬೇಕಿದ್ದ ನ್ಯಾಯ್​ ಯಾತ್ರೆಯನ್ನು ಅಸ್ಸಾಂ ಪೊಲೀಸರು ತಡೆದಿದ್ದಾರೆ.

    ಇದನ್ನೂ ಓದಿ:‘ಗುಂಟೂರು ಕಾರಂ’ vs ‘ಹನು-ಮಾನ್’: ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರಕ್ಕೆ ಭಾರೀ ಮುನ್ನಡೆ! ​

    ಗುವಾಹಟಿಯಲ್ಲಿ ಇದು ಕೆಲಸದ ದಿನವಾಗಿದೆ ಮತ್ತು ಯಾತ್ರೆಯು ಪ್ರಮುಖ ನಗರ ರಸ್ತೆಗಳ ಮೂಲಕ ಚಲಿಸಲು ಅವಕಾಶ ನೀಡುವುದರಿಂದ ಸಂಚಾರ ದಟ್ಟನೆ ಹೆಚ್ಚಾಗಿ ಜನಸಾಮನ್ಯರಿಗೆ ತೊಂದರೆಯಾಗಲಿದೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸರ್ಕಾರ ಯಾತ್ರೆ ರಸ್ತೆಗಳ ಮೂಲಕ ತೆರಳಲು ಅನುಮತಿ ನಿರಾಕರಿಸಿದೆ ಎನ್ನಲಾಗಿದೆ.

    ಅಸ್ಸಾಂ ಸರ್ಕಾರ ರಾಷ್ಟ್ರೀಯ ಹೆದ್ದಾರಿ 27 ಮುಖಾಂತರ ತೆರಳುವಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೋರಲಾಗಿತ್ತು. ಆದರೆ ಕ್ಷುಲ್ಲಕ ಕಾರಣ ಹೇಳಿ ನಗರ ಪ್ರವೇಶ ನಿರಾಕರಿಸಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

    ರಾಹುಲ್ ಗಾಂಧಿ ನೇತೃತ್ವದ ಯಾತ್ರೆಗೆ ಹಿಮಂತ ಬಿಸ್ವ ಶರ್ಮಾ ಸರ್ಕಾರ ಅಡ್ಡಿಪಡಿಸುತ್ತಿದೆ. ನಾವು ಅಸ್ಸಾಂಗೆ ಪ್ರವೇಶಿಸಿದಾಗಿನಿಂದ, ಸಿಎಂ ತನ್ನ ಗೂಂಡಾಗಳನ್ನು ಬಳಸಿಕೊಂಡು ನಮ್ಮ ಬೆಂಗಾವಲು ಪಡೆಗಳು, ನಮ್ಮ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ ಆರೋಪ ಮಾಡಿದ್ದಾರೆ.

    ಅಸ್ಸಾಂನ ಹೈಬೋರಗಾಂವ್‌ನಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಂಕರ ದೇವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅಧಿಕಾರಿಗಳು ಅನುಮತಿ ನೀಡದ ನಂತರ ಹೈ ಡ್ರಾಮಾ ನಡೆದಿತ್ತು. ಗಾಂಧಿ ಮತ್ತಿತರರನ್ನು ಮುಂದಿನ ಯಾವುದೇ ಪ್ರಕ್ರಿಯೆ ನಡೆಯದಂತೆ ಅಲ್ಲಿಯೇ ತಡೆಯಲಾಗಿತ್ತು.

    ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಗಾಂಧಿ ಪೊಲೀಸ್ ಅಧಿಕಾರಿಗಳಿಗೆ ರಾಹುಲ್​ ಗಾಂಧಿ ಹೇಳಿದ್ದರು.

    ಕಂಗನಾ ಅಭಿನಯದ ಬಹುನಿರೀಕ್ಷಿತ ‘ಎಮರ್ಜೆನ್ಸಿ’ ರಿಲೀಸ್ ಡೇಟ್ ಫಿಕ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts