More

    ‘ಗುಂಟೂರು ಕಾರಂ’ vs ‘ಹನು-ಮಾನ್’: ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರಕ್ಕೆ ಭಾರೀ ಮುನ್ನಡೆ! ​

    ಆಂಧ್ರಪ್ರದೇಶ: ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಮತ್ತು ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ‘ಗುಂಟೂರು ಕಾರಂ’ ಮತ್ತು ತೇಜ ಸಜ್ಜ ನಟನೆಯ ಪ್ಯಾನ್ ಇಂಡಿಯಾ ‘ಹನು-ಮಾನ್’​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸದ್ಯ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿಗೆ ಇಳಿದಿದೆ. ಆರಂಭದಿಂದಲೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಈ ಎರಡು ಚಿತ್ರಗಳು ಗಳಿಕೆಯಲ್ಲಿ ನಾ ಮುಂದು ತಾ ಮುಂದು ಎಂದು ಸೆಣಸಾಡುತ್ತಿವೆ. ಹಾಗಾದ್ರೆ, ಇತ್ತೀಚಿನ ಸಿನಿ ವರದಿ ಪ್ರಕಾರ ಈ ಇಬ್ಬರು ನಟರ ಸಿನಿಮಾಗಳು ಇಲ್ಲಿಯವರೆಗೆ ಗಳಿಸಿದ್ದೆಷ್ಟು? ಎಂಬುದರ ವಿವರ ಹೀಗಿದೆ.

    ಇದನ್ನೂ ಓದಿ: ಬ್ಯಾನ್‌ ಆದ್ರೂ ಹಾಟ್​ ಫೋಟೋಗಳಿಂದ ವರ್ಷಕ್ಕೆ 1 ಕೋಟಿ ರೂ. ಗಳಿಸುವ ಮೋಹಕ ಬೆಡಗಿ

    ಪ್ರಶಾಂತ್ ವರ್ಮ ನಿರ್ದೇಶನದ ತೇಜ ಸಜ್ಜ ನಟನೆಯ ‘ಹನು-ಮಾನ್’​ ಚಿತ್ರವು ತನ್ನ ಆಕರ್ಷಕ ವಿಎಫ್​ಎಕ್ಸ್​ ಕೆಲಸಗಳಿಂದಲೇ ಹೆಚ್ಚು ಗಮನಸೆಳೆಯುತ್ತಿದ್ದು, ಸದ್ಯ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಕಿಕ್​ ಸ್ಟಾರ್ಟ್​ ಪಡೆದ ಸಿನಿಮಾ, ಇದೀಗ 12ನೇ ದಿನವು ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕವಾಗಿ 225 ಕೋಟಿ ರೂ.ನತ್ತ ಸಾಗುತ್ತಿರುವ ಚಿತ್ರದ ಒಟ್ಟು ಕಲೆಕ್ಷನ್​ ವಿವರ ಇದು.

    ಇದನ್ನೂ ಓದಿ:  We need to make every interaction count: Riaan Rodrigues, Tata AIG

    ದಿನ 1: 21.35 ಕೋಟಿ ರೂ.
    ದಿನ 2: 29.72 ಕೋಟಿ ರೂ.
    ದಿನ 3: 24.16 ಕೋಟಿ ರೂ.
    ದಿನ 4 – 25.63 ಕೋಟಿ ರೂ.
    ದಿನ 5 – 19.57 ಕೋಟಿ ರೂ.
    ದಿನ 6 – 15.40 ಕೋಟಿ ರೂ.
    ದಿನ 7 – 14.75 ಕೋಟಿ ರೂ.
    ದಿನ 8 – 14.20 ಕೋಟಿ ರೂ.
    ದಿನ 9- 20.37 ಕೋಟಿ ರೂ.
    ದಿನ 10 – 23.91 ಕೋಟಿ ರೂ.
    ದಿನ 11 – 9.36 ಕೋಟಿ ರೂ.
    ಒಟ್ಟು 218.42 ಕೋಟಿ ರೂ. ಕೆಲೆಕ್ಷನ್ ಕಂಡಿದೆ.

    ಇನ್ನು ಜಾಗತಿಕವಾಗಿ ‘ಗುಂಟೂರು ಕಾರಂ’ 200 ಕೋಟಿ ರೂ. ಕ್ಲಬ್​ ಸೇರಲು ಕೊಂಚ ಸಮೀಪದಲ್ಲಿದ್ದು, ಇಲ್ಲಿಯವರೆಗಿನ ಒಟ್ಟು ಕಲೆಕ್ಷನ್ ವಿವರ ಇದು..

    ಇದನ್ನೂ ಓದಿ: ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’: ಒಂದು ಕೋಟಿ ಮನೆಗಳಿಗೆ ಸೌರಫಲಕ ಗುರಿ

    ದಿನ 1: 82.08 ಕೋಟಿ ರೂ.
    ದಿನ 2: 24.59 ಕೋಟಿ ರೂ.
    ದಿನ 3: 22.36 ಕೋಟಿ ರೂ.
    ದಿನ 4: 21.14 ಕೋಟಿ ರೂ.
    ದಿನ 5: 13.92 ಕೋಟಿ ರೂ.
    ದಿನ 6: 9.65 ಕೋಟಿ ರೂ.
    ದಿನ 7: 7.11 ಕೋಟಿ ರೂ.
    ದಿನ 8: 4.59 ಕೋಟಿ ರೂ.
    ದಿನ 9: 4.23 ಕೋಟಿ ರೂ.
    ದಿನ 10: 5.31 ಕೋಟಿ ರೂ.
    ಒಟ್ಟು – 194.98 ಕೋಟಿ ರೂ. ಕಲೆಕ್ಷನ್ ಕಂಡಿದೆ,(ಏಜೆನ್ಸೀಸ್).

    BBKS10: ಟಾಪ್‌ 3ರಲ್ಲಿ ಈ ಮೂವರು ಇರ್ತಾರೆ! ನಮ್ರತಾ ಸೂಚಿಸಿದ ಸ್ಪರ್ಧಿಗಳು ಇವರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts