ಹಿತ್ಲುಗದ್ದೆಯಲ್ಲಿ ವರ್ಷಾವಧಿ ಮಾರಿಜಾತ್ರೆ

hitthlugadde
ಅಲಂಕೃತಗೊಂಡ ಶ್ರೀ ಪಂಜುರ್ಲಿ ದೈವಸ್ಥಾನದ ದೇವರು.
Published on

ಗಂಗೊಳ್ಳಿ: ಹಿತ್ಲುಗದ್ದೆ ಮನೆ ಶ್ರೀ ಪಂಜುರ್ಲಿ ದೈವಸ್ಥಾನದಲ್ಲಿ ವರ್ಷಾವಧಿಯ ಮಾರಿಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಮಂಗಳವಾರ ರಾತ್ರಿ ಕ್ಷೇತ್ರಕ್ಕೆ ಗಂಗಾಜಲ ತಂದು ಬಳಿಕ ದೇವರಿಗೆ ಹೂ ಸಮರ್ಪಣೆ, ಹಾಲು ಹಣ್ಣು ಅರ್ಪಣೆ, ಮುಡಿ ತುಂಬುವುದು, ತುಲಾಭಾರ ಸೇವೆ ಹಾಗೂ ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬುಧವಾರ ವಿಶೇಷ ಪೂಜೆ, ಮಂಗಳಾರತಿ ಸೇವೆ ನಡೆಯಿತು. ಆಡಳಿತ ಮೋಕ್ತೆಸರರು, ಕುಟುಂಬಸ್ಥರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net