ಶೇಡಿಮನೆಯಲ್ಲಿ ಮಕ್ಕಳ ಯಕ್ಷಗಾನ

sanmana
ಜಲದುರ್ಗಾ ಫ್ರೇಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಣೇಶ ಗುನಗ, ವಿಘ್ನೇಶ್ ದೇವಾಡಿಗ, ವಿಜಯಕುಮಾರ್ ಕೋಡಿಯಲ್‌ಬೈಲ್ ಅವರನ್ನು ಸನ್ಮಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಆರ್ಡಿ

ಶೇಡಿಮನೆ ಜಲದುರ್ಗಾ ಫ್ರೆಂಡ್ಸ್ ವತಿಯಿಂದ ಸ್ವರ್ಣನೂಪುರ ಯಕ್ಷಗಾನ ಮಂಡಳಿ ಕುಂದಾಪುರ ಸಹಭಾಗಿತ್ವದಲ್ಲಿ ಅಮಾಸೆಬೈಲು ಡ್ಯುಯೆಲ್ ಸ್ಟಾರ್ ಅಂಗ್ಲ ಮಾಧ್ಯಮ ಶಾಲೆ ಮಕ್ಕಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ, ಶಿವದೂತೆ ಗುಳಿಗ ನಾಟಕ ಶೇಡಿಮನೆ ಪೇಟೆಯಲ್ಲಿ ಸೋಮವಾರ ನಡೆಯಿತು.

ಗಣೇಶ ಗುನಗ ಕುಂದಾಪುರ, ವಿಘ್ನೇಶ್ ದೇವಾಡಿಗ, ವಿಜಯಕುಮಾರ್ ಕೋಡಿಯಲ್‌ಬೈಲ್, ಡ್ಯುಯೇಲ್ ಸ್ಟಾರ್ ಅಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ವಡ್ಡರ್ಸೆ ಹಾಗೂ ವೃಂದ, ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮಡಾಮಕ್ಕಿ ಗ್ರಾ.ಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಪ್ರಮುಖರಾದ ವಿಜಯಕುಮಾರ್ ಹೆಗ್ಡೆ, ಬಾಬು ಪೂಜಾರಿ, ಸುರೇಶ ಹೆಗ್ಡೆ, ಶ್ರೀನಿವಾಸ ನಾಯ್ಕ, ಸತೀಶ್ ಪೂಜಾರಿ, ಕೃಷ್ಣ ಪೂಜಾರಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸುರೇಶ ಹೆಗ್ಡೆ ಸ್ವಾಗತಿಸಿದರು. ರಾಘವೇಂದ್ರ ಪೂಜಾರಿ ವಂದಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.

ವಿಘ್ನೇಶ್ ದೇವಾಡಿಗ ನಿರ್ದೇಶನದಲ್ಲಿ ಹಾಗೂ ಗಣೇಶ ಗುನಗ ಕುಂದಾಪುರ ಸಂಯೋಜನೆಯಲ್ಲಿ ಡ್ಯುಯೇಲ್ ಸ್ಟಾರ್ ಅಂಗ್ಲ ಮಾಧ್ಯಮ ಶಾಲೆ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಪೂಜಾ ಆಚಾರ್ಯ, ರಾಘವೇಂದ್ರ ಹೆಗ್ಗಡೆ, ರಾಹುಲ್ ಕೋಡಿ ಸಹಕರಿಸಿದರು. ಬಳಿಕ ವಿಜಯ್‌ಕುಮಾರ್ ಕೋಡಿಯಲ್‌ಬೈಲ್ ನಿರ್ದೇಶನದ ಸ್ವರಾಜ್ ಶೆಟ್ಟಿ ಅಭಿನಯದ ಶಿವದೂತೆ ಗುಳಿಗ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net