

ಕೋಟ: ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಮಾಡಬಾರದು ರಾಜಕಾರಣಿಗಳ ಸಹಕಾರ ಪಡೆದು ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯವಾಗಬೇಕು ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಮಂಗಳವಾರ ಕೋಟದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘ 2025 ವಿಜೇತ ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರ ಇದರ ಅಭ್ಯರ್ಥಿಗಳ ಮತ್ತು ಕಾರ್ಯಕರ್ತರ ಅಭಿನಂದನಾ ಮತ್ತು ಕೃತಜ್ಞತಾ ಸಭೆಯಲ್ಲಿ ಜಯಶಾಲಿಯಾದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಸೋಲೆ ಗೆಲುವಿನ ಮೂಲ ಎಂಬುವುದನ್ನು ಪ್ರತಿಯೊಬ್ಬರು ಮನಗಾಣಬೇಕು, ಸಹಕಾರಿ ರೈತಪರ ಕ್ಷೇತ್ರವಾಗಿದೆ ಅದನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿ ಒಂದಿಷ್ಟು ಯುವ ಸಮೂಹಕ್ಕೆ ಉದ್ಯೋಗಾವಕಾಶ ನೀಡವಂತಾಗಬೇಕು, ಕೋಟ ಸಹಕಾರಿ ಸಂಘ ಅಭಿವೃದ್ಧಿಯಲ್ಲಿ ಹಿಂದಿನ ಆಡಳಿತ ಮಂಡಳಿ ಜತೆ ಪ್ರಸ್ತುತ ಸಂಘದ ನಿರ್ದೇಶಕರ ಪಾತ್ರ ಗಣನೀಯ. ಚುನಾವಣೆ ಸಂದರ್ಭ ಆಪಾದನೆಗಳು ಸಹಜ, ಹಾಗೆಂದ ಮಾತ್ರಕ್ಕೆ ಅದೇ ಅಂತಿಮವಲ್ಲ. ನೀವು ನಿರ್ದಿಷ್ಟವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಿರಿ ಎಂದರ್ಥ ಎಂಬುವುದನ್ನು ಪ್ರಸ್ತುತ ತಂಡಕ್ಕೆ ಕಿವಿಮಾತು ಹೇಳಿ ಜನ ನಿಮ್ಮ ಕಾರ್ಯಕ್ಕೆ ಕೈ ಹಿಡಿದಿದ್ದಾರೆ ಮತ್ತಷ್ಟು ಯಶಸಿನ ದಾರಿಗೆ ಕೊಂಡ್ಯೊಯುವ ಕಾರ್ಯವಾಗಲಿ ಎಂದು ಹಾರೈಸಿದರು.
ಇದೇ ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಹತ್ತು ಹಾಗೂ ಸೋತ ಮೂವರು ಸಹಕಾರಿ ಮಿತ್ರ ತಂಡದ ಅಭ್ಯರ್ಥಿಗಳನ್ನು ಗೌರವಿಸಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನದ ಹೆಗ್ಡೆ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಕೋಟ ವ್ಯವಸಾಯಕ ಸಂಘದ ಮಾಜಿ ಅಧ್ಯಕ್ಷ ಭೋಜ ಹೆಗ್ಡೆ, ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ.ಕುಂದರ್, ನಿರ್ದೇಶಕರಾದ ಜಿ.ತಿಮ್ಮ ಪೂಜಾರಿ, ಡಾ.ಕೃಷ್ಣ ಕಾಂಚನ್, ಉದಯ್ ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ, ಟಿ.ಮಂಜುನಾಥ ಗಿಳಿಯಾರು, ವಸಂತಿ ಅಚ್ಯುತ್ ಪೂಜಾರಿ, ರವೀಂದ್ರ ಕಾಮತ್, ನಾಗರಾಜ್ ಹಂದೆ, ಚಂದ್ರ ಪೂಜಾರಿ, ಪರಾಜಿತ ಅಭ್ಯರ್ಥಿಗಳಾದ ರಾಘವೇಂದ್ರ ಮಧ್ಯಸ್ಥ, ಪ್ರೇಮ ಮೆಂಡನ್, ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಮುಖಂಡರಾದ ವಿನಯ್ ಕಬ್ಯಾಡಿ ನಿರೂಪಿಸಿ, ವಂದಿಸಿದರು. ಟಿ.ಮಂಜುನಾಥ ಗಿಳಿಯಾರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.