ಅಧ್ಯಾತ್ಮದ ಒಲವಿದ್ದರೆ ದೇವರ ಕೃಪೆ : ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಅನಿಸಿಕೆ

New Project (8)
Published on

ಪುತ್ತೂರು ಗ್ರಾಮಾಂತರ: ನಮ್ಮಲ್ಲಿ ಅಧ್ಯಾತ್ಮದ ಹಸಿವು ಇದ್ದಾಗಲೇ ದೇವರನ್ನು ಕಾಣಲು ಸಾಧ್ಯ. ಬದುಕಿನಲ್ಲಿ ಸಂತೋಷ ಕಾಣಬೇಕಾದರೆ ನಂಬಿಕೆ ಮುಖ್ಯ. ಪ್ರತಿಯೊಬ್ಬರು ದೇವರ ಮೇಲೆ ನಂಬಿಕೆಯಿಟ್ಟು ಜೀವನ ನಡೆಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತುಳು ಸಾಹಿತ್ಯ ಪರಿಷತ್ ಸದಸ್ಯ, ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.

ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನಃಪ್ರತಿಷ್ಠಾ ದಿನದ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಾತನಾಡಿದರು.

ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಶುಭಹಾರೈಸಿದರು. ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ವಾಸು ಮಣಿಯಾಣಿ ಕುರಿಂಜ ಅಧ್ಯಕ್ಷತೆ ವಹಿಸಿದ್ದರು.

ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಕುಂಬ್ರದ ವಾತೃಶ್ರೀ ಅರ್ಥ್‌ಮೂವರ್ಸ್‌ ಸಂಸ್ಥೆಯ ವಾಲಕ ಮೋಹನದಾಸ ರೈ ಕುಂಬ್ರ, ಕುಕ್ಕುತ್ತಡಿ ದರ್ಬೆ ಶ್ರೀ ನೇತ್ರಾವತಿ ಗರಡಿಯ ಆಡಳಿತ ಮೊಕ್ತೇಸರ ಜಯರಾಮ ಪೂಜಾರಿ, ಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಮಜ್ಜಾರಡ್ಕ ಶ್ರೀವಿಷ್ಣು ಯುವಶಕ್ತಿ ಬಳಗದ ಸಂಟಕ ರಾಜೇಶ್ ಕೆ.ಮಯೂರ, ದರ್ಬೆತ್ತಡ್ಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧಾಕರ ನಾಯಕ್ ಉಪಸ್ಥಿತರಿದ್ದರು.

ಭಜನಾ ಮಂದಿರದ ವಿವಿಧ ಜೀರ್ಣೋದ್ಧಾರ ಕಾರ್ಯಗಳಿಗೆ ಆರ್ಥಿಕ ನೆರವು ನೀಡಿದ್ದ ದಾನಿಗಳನ್ನು ಗೌರವಿಸಲಾಯಿತು. ದರ್ಬೆತ್ತಡ್ಕದ ಶ್ರೀ ವಿಷ್ಣು ಸೇವಾ ಬಳಗದ ವತಿಯಿಂದ ದರ್ಬೆತ್ತಡ್ಕ ಶಾಲೆಗೆ ಬಟ್ಟಲು ಇಡುವ ರ‌್ಯಾಕ್ ಕೊಡುಗೆಯಾಗಿ ನೀಡಲಾಯಿತು. ಅಯ್ಯಪ್ಪ ಭಜನಾ ಮಂದಿರದ ವಾಜಿ ಅಧ್ಯಕ್ಷ ಶಿವರಾಮ ಮಣಿಯಾಣಿ ಪ್ರಸ್ತಾವಿಸಿದರು. ಮಂದಿರದ ಕಾರ್ಯದರ್ಶಿ ರವೀಂದ್ರ ಡಿ. ವರದಿ ವಾಚಿಸಿದರು. ಭಕ್ತ ಸಮಿತಿಯ ಸಹ ಕಾರ್ಯದರ್ಶಿ ಪ್ರಮೋದಿನಿ ನವೀನ್ ರೈ ಸ್ವಾಗತಿಸಿದರು. ಸದಸ್ಯ ಪುರುಷೋತ್ತಮ ಕೆ.ಎಂ. ವಂದಿಸಿದರು. ಸದಸ್ಯ ಸದಾನಂದ ಮಣಿಯಾಣಿ ನಿರೂಪಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ

ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಭಜನಾ ಮಂದಿರದಲ್ಲಿ ಗಣಪತಿ ಹೋಮ, ಶ್ರೀ ಅಯ್ಯಪ್ಪ ಪೂಜೆ, ರಕ್ತೇಶ್ವರಿಗೆ ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಅರ್ಚಕ ಶಿವಪ್ರಸಾದ್ ಕಡಮಣ್ಣಾಯ ಕಾವು ಮತ್ತು ತಂಡದಿಂದ ಸತ್ಯನಾರಾಯಣ ಪೂಜಾ ವಿಧಿವಿಧಾನ ನಡೆಯಿತು. ಪೂಜೆಯ ಪ್ರಸಾದ ವಿತರಣೆಯ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಕುಣಿತ ಭಜನೆ, ಮಂಗಳಾರತಿ, ರಾತ್ರಿ ಅನ್ನಸಂತರ್ಪಣೆ ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net