

ಸುಳ್ಯ: ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಫಾರ್ಮಸಿ ಹಾಗೂ ರಕ್ತ ಪರೀಕ್ಷಾ ಕೇಂದ್ರದಲ್ಲಿ ಟೋಕನ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅತಿ ಅವಶ್ಯವಿರುವ ಅನುಭವಿ ಎಕ್ಸ್ರೇ ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಣ್ಣಿನ ಪರೀಕ್ಷಾ ತಂತ್ರಜ್ಞರನ್ನು ನೇಮಕ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಬರೆಯುವುದು ಎಂದು ತೀರ್ಮಾನಿಸಲಾಯಿತು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ಕರುಣಾಕರ ಕೆ.ವಿ., ಸದಸ್ಯರಾದ ಶಹೀದ್ ಪಾರೆ, ರಾಧಾಕೃಷ್ಣ ಪರಿವಾರಕಾನ, ಚಂದ್ರನ್ ಕೂಟೇಲ್, ವಿಜಯ, ಜಯರಾಮ, ಗಿರೀಶ್ ಪಡ್ಡಂಬೈಲ್, ಸಂಜೀವ ಬಡೇಕಲ್ಲು ಉಪಸ್ಥಿತರಿದ್ದರು.