ಗ್ರಾಮಮಟ್ಟದಲ್ಲಿ ಗ್ಯಾರಂಟಿ ಕ್ಯಾಂಪ್

Published on

ಸುಳ್ಯ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪುವಂತಾಗಲು ಗ್ರಾಮದಲ್ಲಿ ವಿಲೇವಾರಿ ಕ್ಯಾಂಪ್ ಆಯೋಜಿಸಲಾಗಿದೆ ಎಂದು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸಿದವರಲ್ಲಿ ಐಟಿ ಪಾವತಿ, ಆದಾಯ ಹೆಚ್ಚಳ ಇತ್ಯಾದಿ ತಾಂತ್ರಿಕ ಕಾರಣದಿಂದ ಹಣ ಬಾದೆ ಬಾಕಿಯಾಗಿದೆ ಅಲ್ಲದೆ ಇನ್ನೂ ಕೆಲವರು ಅರ್ಜಿ ಸಲ್ಲಿಸಲು ಬಾಕಿಯಾಗಿವೆ ಎಂಬ ಕಾರಣಕ್ಕೆ ಸರ್ಕಾರದ ಯೋಜನೆಗಳು ಎಲ್ಲರಿಗೂ ಸಿಗಬೇಕೆಂದು ಗ್ರಾಮಗಳಲ್ಲಿ ವಿಲೇವಾರಿ ಕ್ಯಾಂಪ್ ಮಾಡುತ್ತೇವೆ. ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪಂಚಾಯತ್ ವಠಾರದಲ್ಲಿ ಕ್ಯಾಂಪ್ ನಡೆಯಲಿದ್ದು, ಅರ್ಜಿ ಸಲ್ಲಿಸಿ ಹಣ ಬಾರದವರು ಕ್ಯಾಂಪ್‌ನಲ್ಲಿ ಭಾಗವಹಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಕ್ಯಾಂಪ್ ವಿವರ:

ಪ್ರಥಮ ಕ್ಯಾಂಪ್ ಸಂಪಾಜೆಯಲ್ಲಿ ಡಿ.9ರಂದು ಬೆಳಗ್ಗೆ ನಡೆಯಲಿದ್ದು, ಮಧ್ಯಾಹ್ನ ಅರಂತೋಡು ಗ್ರಾಪಂನಲ್ಲಿ. 17ರಂದು ಬೆಳಗ್ಗೆ ಪಂಜ ಗ್ರಾಪಂನಲ್ಲಿ, ಮಧ್ಯಾಹ್ನ ಕಲ್ಮಡ್ಕದಲ್ಲಿ 26ರಂದು ಬೆಳಗ್ಗೆ ಮಂಡೆಕೋಲು, ಮಧ್ಯಾಹ್ನ ಅಜ್ಜಾವರದಲ್ಲಿ ಜ.2ರಂದು ಬೆಳಗ್ಗೆ ಕೊಲ್ಲಮೊಗ್ರು, ಮಧ್ಯಾಹ್ನ ಹರಿಹರದಲ್ಲಿ 8ರಂದು ಬೆಳಗ್ಗೆ ಪೆರುವಾಜೆ, ಮಧ್ಯಾಹ್ನ ಬೆಳ್ಳಾರೆ, 13ರಂದು ಬೆಳಗ್ಗೆ ಗುತ್ತಿಗಾರು, ಮಧ್ಯಾಹ್ನ ದೇವಚಳ್ಳ, 22ರಂದು ಕೊಡಿಯಾಲ, ಮಧ್ಯಾಹ್ನ ಮುರುಳ್ಯ, 30 ಅಮರಮುಡ್ನೂರು, ಮಧ್ಯಾಹ್ನ ನೆಲ್ಲೂರು ಕೆಮ್ರಾಜೆ, ಫೆ.4 ಕನಕಮಜಲು, ಮಧ್ಯಾಹ್ನ ಜಾಲ್ಸೂರು, 12 ರಂದು ಕಳಂಜ, ಮಧ್ಯಾಹ್ನ ಬಾಳಿಲ, 19ರಂದು ಮಡಪ್ಪಾಡಿ, ಮಧ್ಯಾಹ್ನ ಮಕರ್ಂಜ, 24ರಂದು ಸುಳ್ಯನಗರ ಪಂಚಾಯತ್, ಮಧ್ಯಾಹ್ನ ಉಬರಡ್ಕಮಿತ್ತೂರು, ಮಾ.6ರಂದು ಐವರ್ನಾಡು, ಮಧ್ಯಾಹ್ನ ಸುಳ್ಯನ.ಪಂ., ಮಾ.10ರಂದು ಆಲೆಟ್ಟಿಯಲ್ಲಿ ಕ್ಯಾಂಪ್ ನಡೆಯಲಿದೆ.

ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಲತೀಫ್ ಅಡ್ಕಾರು, ವಿಜೇಶ್ ಹಿರಿಯಡ್ಕ ಅಬ್ಬಾಸ್ ಅಡ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net