ಅಂಜಲಿ ಕಾನ್ವೆಂಟ್, ನೈಟಿಂಗೇಲ್ ಪ್ರೌಢಶಾಲೆ ವಾರ್ಷಿಕೋತ್ಸವ ; ಪ್ರತಿಭೋತ್ಸವ-2025

anjali
Published on

ಬೆಂಗಳೂರು: ಸುಂಕದಕಟ್ಟೆಯ ಶ್ರೀನಿವಾಸನಗರದ ಅಂಜಲಿ ಕಾನ್ವೆಂಟ್ ಮತ್ತು ನೈಟಿಂಗೇಲ್ ಪ್ರೌಢಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭೋತ್ಸವ 2025ನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮಿಗಳು, ಪೋಷಕರು ಕೇವಲ ಮಕ್ಕಳನ್ನು ಶಾಲೆಗೆ ಸೇರಿಸಿ ಹೆಚ್ಚಿನ ಅಂಕಗಳನ್ನು ತೆಗೆಯುವಂತೆ ಒತ್ತಡ ಹೇರಿದರೆ ಸಾಲದು. ಶಿಕ್ಷಣದ ಜೊತೆಗೆ ಸಂಸ್ಕಾರ, ಸಾಮಾಜಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು ಎಂದರು.

ಅಂಜಲಿ ಕಾನ್ವೆಂಟ್ ಹಾಗೂ ನೈಟಿಂಗೇಲ್ ಪ್ರೌಢಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರ ಸರಳತೆ, ಕಠಿಣ ಶ್ರಮ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಬಗೆಗಿನ ಕಾಳಜಿ ಉತ್ತಮವಾಗಿದೆ. ಶಿಕ್ಷಕರು ಮೌಡ್ಯಗಳಿಂದ ದೂರವಿದ್ದು ಮಕ್ಕಳನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ನಂತರ ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ವರ್ಣರಂಜಿತ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಜನರ ಕಣ್ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಕೆ.ಜಿ.ವಿಶ್ವೇಶ್ವರಯ್ಯ, ಪ್ರಾಂಶುಪಾಲರಾದ ಡಾ. ಬಿ.ಕೃಷ್ಣಗೌಡ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಸರಳ, ನಿವೃತ್ತ ಪ್ರಾಂಶುಪಾಲ ನಾಗೇಗೌಡ, ಬಿ. ಆರ್. ತೋಂಟದಾರ್ಯ, ಸ್ಥಳೀಯ ಬಿ.ಜೆ.ಪಿ ಮುಖಂಡ ಕೃಷ್ಣಯ್ಯ, ಹಿರಿಯ ನಟಿ ಮಾಲತಿ, ಸುಮಿತ್ರಮ್ಮ ಜೂ. ರಾಜ್ ಕುಮಾರ್, ಜೂ. ಪುನೀತ್ ಇನ್ನಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ 2023-24ನೇ ಸಾಲಿನ ವಿವಿಧ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ 13ನೇ ಬಾರಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಮತ್ತು ಉನ್ನತ ಸಾಧನೆ ಮಾಡಿರುವ ಸಂಸ್ಥೆಯ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net