ಅನಂತ ಕಾಂಬಳೆ ನಿಧನ; ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ

ananth kamble
Published on

ಬೆಂಗಳೂರು: ಸ್ವಕುಳಸಾಳಿ ಸಮಾಜದ ಹಿರಿಯ ಮುಖಂಡರಾಗಿದ್ದ ಅನಂತ ಕಾಂಬಳೆರವರು (80) ಸೋಮವಾರ ಬೆಂಗಳೂರಿನ ರಾಜಾಜಿನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದು, ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸ್ವಕುಳಸಾಳಿ ಸಮಾಜದ ಚಿಂತಕರು, ಸ್ವಕುಳ ಆಚಾರ-ವಿಚಾರಗಳ ಬಗ್ಗೆ ಅನೇಕ ಕೃತಿ, ಲೇಖನ ಹಾಗೂ ಕವಿತೆಗಳನ್ನು ಬರೆದು ಸಮಾಜವನ್ನು ಜಾಗೃತಗೊಳಿಸಿದ್ದರು. ಇತ್ತೀಚೆಗೆ ಗಾಂಧಿನಗರದ ಅನಂತಸ್ವಾಮಿ ಆಶ್ರಮದ ಶ್ರೀಹರಿಹರಾನಂದ ಭಾರತಿ ಸ್ವಾಮಿಗಳ ಜೀವನ ಚರಿತ್ರೆ ಬಗ್ಗೆ ಗ್ರಂಥವನ್ನು ಪ್ರಕಟಿಸಿದ್ದರು.
ಕಾಂಬಳೆ ಅವರು ಬಿ.ಇ.ಸ್ವಕುಳ ಸಮಾಜದ ಅಧ್ಯಕ್ಷರಾಗಿಯೂ ಹಲವಾರು ವರ್ಷ ಸೇವೆ ಸಲ್ಲಿಸಿದ್ದರು. 25 ವರ್ಷಗಳಿಂದ ಪ್ರತಿವರ್ಷವೂ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ, ಸಮಾಜದವರಿಗಾಗಿ ಉಪಾಕರ್ಮವನ್ನೂ ಏರ್ಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಅನಂತ ಕಾಂಬಳೆ ಅವರ ಆಕಸ್ಮಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಸಮಾಜದ ಅನೇಕ ಪ್ರಮುಖರು ಭೇಟಿ ಕೊಟ್ಟು ಅವರ ಆತ್ಮಕ್ಕೆ ಶಾಂತಿ ಕೋರಿದರು. ಅವರ ಇಚ್ಛೆಯಂತೆ ದೇಹವನ್ನು ರಾಮಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net