ಆರಕ್ಕಲ್ ಚಿತ್ರಕಲೆಗಳ ಪ್ರದರ್ಶನ; ಗಂಗಾ ನದಿಯ ಮಹತ್ವ ಬಿಂಬಿಸುವ ಚಿತ್ರಗಳು

Art Exhibition
Published on

ಬೆಂಗಳೂರು: ಖ್ಯಾತ ಚಿತ್ರಕಲಾವಿದ ಯೂಸುಫ್ ಆರಕ್ಕಲ್ ಅವರ ಚಿತ್ರ ಕಲಾಕೃತಿಗಳು ಹಾಗೂ ಅವರ ಪುತ್ರ ಶಿಬು ಆರಕ್ಕಲ್ ಅವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನವನ್ನು ಸಂದೀಪ್ ಗೀತಾಂಜಲಿ ಮೈನಿ ಫೌಂಡಶನ್ ಆಯೋಜಿಸಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ, 7ನೇ ಅಡ್ಡರಸ್ತೆಯಲ್ಲಿರುವ ಫೌಂಡೇಶನ್ ಆವರಣ ಮೈನಿ ಸದನ್‌ನಲ್ಲಿ ಆರಂಭವಾಗಿರುವ ಚಿತ್ರಕಲಾಕೃತಿಗಳ ಪ್ರದರ್ಶನವು ಜು.10 ರವರೆಗೆ ನಡೆಯಲಿದೆ.
ಭಾರತದ ಜನಸಮುದಾಯದ ಆಧ್ಯಾತ್ಮಿಕ ಭಾಗವಾಗಿರುವ ಗಂಗಾನದಿಯ ಮಹತ್ವ ಮತ್ತು ಪಾತ್ರವನ್ನು ಪ್ರತಿಬಿಂಬಿಸುವ ವಿಶೇಷ ಪರಿಕಲ್ಪನೆಯಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮಲ್ಲಾ ಎಂದು ಕರೆಯಲ್ಪಡುವ ದೋಣಿ ನಡೆಸುವ ಅಂಬಿಗರ ಸಂಪೂರ್ಣ ಜನಜೀವನ ಈ ಗಂಗಾ ಸರಣಿಯ ವಿಶೇಷ. ನದಿ, ದೋಣಿ, ಅಂಬಿಗರು ಎಲ್ಲವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ತಂದೆ ಯೂಸ್ು ಚಿತ್ರಕಲೆಯ ಜೊತೆಗೆ ಪುತ್ರ ಶಿಬು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಚಿತ್ರಗಳು ಈ ಪ್ರದರ್ಶನದಲ್ಲಿ ಒಂದಕ್ಕೊಂದು ಪೈಪೋಟಿ ನೀಡುವಂತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net