

ಶನಿವಾರ ಖಾಸಗಿ ಹೋಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಶ್ರೀನಿವಾಸ ಮೂರ್ತಿ, ಅಲೋಪತಿ ಪದ್ಧತಿಯಲ್ಲಿ ಯಾವುದೇ ಹೊಸ ಔಷಧಿ ಮಾರುಕಟ್ಟೆಗೆ ಬರುವಾಗ ಕ್ಲಿನಿಕಲ್ ಟೆಸ್ಟ್ ಮಾಡುತ್ತಾರೆ. ಅದರಿಂದ ಔಷಧಿಯ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಅದರಂತೆ ಅಮೃತ ನೋನಿ ಆರ್ಥೋ ಪ್ಲಸ್ ಔಷಧಿಯನ್ನು ಕ್ಲಿನಿಕಲ್ ಟೆಸ್ಟ್‌ಗೊಳಪಡಿಸಿದರೆ ಇದರ ಮಹತ್ವ ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಲಿದೆ ಎಂಬ ಕಾರಣಕ್ಕೆ ನಮ್ಮ ಸಂಸ್ಥೆ ಕ್ಲಿನಿಕಲ್ ಟೆಸ್ಟ್ ಮಾಡಿದೆ. ಇದರಿಂದ ಉತ್ತಮ ಲಿತಾಂಶ ಹೊರ ಬಂದಿದ್ದು, ಆರ್ಥೈಟೀಸ್‌ನಿಂದ ಬಳಲುತ್ತಿರುವವರಿಗೆ ಸಹಾಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಓಂ ಶ್ರೀ ಮಾರ್ಕೆಟಿಂಗ್ ಸಲ್ಯೂಷನ್ಸ್ ಲಿಮಿಟೆಡ್‌ನ ಮಂಗಳಾಂಬಿಕೆ, ಸಿಇಓ ನಾರಾಯಣ, ಕ್ಲಿನಿಕಲ್ ಸ್ಪೆಷಲಿಸ್ಟ್ ಡಾ.ಬಿ.ಜಿ.ವಾರುಣಿ, ಅಮೃತನೋನಿ ಹೆಲ್ತ್ ಕೇರ್ ಎಚ್‌ಓಡಿ ಡಾ. ಸಂದೀಪ ಬೆಣಕಲ್, ಡಾ.ಮಹಾಂತಸ್ವಾಮಿ ಹಿರೇಮಠ ಮತ್ತಿತತರರು ಉಪಸ್ಥಿತರಿದ್ದರು.
ಆಯುರ್ವೇದ ಔಷಧಿಯ ಬಗ್ಗೆ ಕ್ಲಿನಿಕಲ್ ಟೆಸ್ಟ್ ಮಾಡುವ ಅಗತ್ಯವಿಲ್ಲದಿದ್ದರೂ ಅಮೃತ್ ನೋನಿ ಆರ್ಥೋ ಪ್ಲಸ್‌ನ ಗುಣಮಟ್ಟ, ಪರಿಣಾಮವನ್ನು ಸಾಭೀತುಪಡಿಸಲು ಕ್ಲಿನಿಕಲ್ ಟೆಸ್ಟ್‌ಗೆ ಒಳಪಡಿಸಿ ಆರ್ಥೈಟೀಸ್ ಸಮಸ್ಯೆಗೆ ಪರಿಣಾಮಕಾರಿ ಹಾಗೂ ಅಡ್ಡಪರಿಣಾಮಗಳಿಲ್ಲದ ಉತ್ತಮ ಔಷಧಿ ಎಂಬ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರು: ಭಾರತೀಯ ಚಿಕಿತ್ಸಾ ಪದ್ಧತಿಯಾಗಿರುವ ಆಯುರ್ವೇದದ ಮೂಲಕ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುತ್ತಿರುವ ಅಮೃತ್ ನೋನಿ ಹೇಲ್ತ್ ಕೇರ್ ಸಂಸ್ಥೆ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ.
ವೈಜ್ಞಾನಿಕ ನೆಲೆಯಲ್ಲಿ ಆರ್ಥೋ ಪ್ಲಸ್ ಪರೀಕ್ಷೆಗೊಳಪಟ್ಟು ಯಶಸ್ವಿ ಲಿತಾಂಶ ಹೊರ ಬಿದ್ದಿರುವುದರಿಂದ ಆರ್ಥೈಟೀಸ್ ರೋಗಿಗಳು ನಿರ್ಭಯವಾಗಿ ಇದನ್ನು ಬಳಸಬಹುದು ಎಂದು ಡಾ.ಮಹಾಂತ ಸ್ವಾಮಿ ಹಿರೇಮಠ ಹೇಳಿದರು.
ಅಮೃತ್ ನೋನಿ ಹೆಲ್ತ್ ಕೇರ್ ಹಿರಿಯ ವೈದ್ಯ ಡಾ.ಸಂದೀಪ್ ಬೆಣಕಲ್, ಆರ್ಥೈಟೀಸ್‌ಗೆ ಶಾಶ್ವತ ಪರಿಹಾರ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲವಾದರೂ ನೋವು ರಹಿತವಾಗಿ ಅದನ್ನು ಮ್ಯಾನೇಜ್ ಮಾಡಲು ಆರ್ಥೋ ಪ್ಲಸ್ ಪರಿಣಾಮಕಾರಿಯಾಗಿದೆ ಎಂದರು.
ಆರ್ಥೈಟೀಸ್ ಸಮಸ್ಯೆ ದೇಶದಲ್ಲಿ ಹೆಚ್ಚುತ್ತಿದ್ದು ಇದಕ್ಕೆ ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿ ಪ್ರಮುಖ ಕಾರಣ ಎಂದು ಓಂ ಶ್ರೀ ಮಾರ್ಕೆಟಿಂಗ್ ಸಲ್ಯೂಷನ್ ಲಿ. ಮುಖ್ಯಸ್ಥೆ ಮಂಗಳಾಂಬಿಕೆ ಹೇಳಿದರು. ಭಾರತದಲ್ಲಿ 210 ಮಿಲಿಯನ್ ಜನರು ಆರ್ಥೈಟೀಸ್‌ನಿಂದ ಬಳಲುತ್ತಿದ್ದು ಅವರಿಗೆ ಅಮೃತ್ ನೋನಿ ಆರ್ಥೋ ಪ್ಲಸ್ ಸಹಕಾರಿಯಾಗಿದೆ ಎಂದರು.
ಭಾರತದಲ್ಲಿ ಹೆಚ್ಚುತ್ತಿರುವ ಆರ್ಥೈಟೀಸ್
-ಎ.ಕೆ.ಶ್ರೀನಿವಾಸ್ ಮೂರ್ತಿ, ಅಮೃತ್ ನೋನಿ ಎಂ.ಡಿ.
2004ರಲ್ಲಿ ಸ್ವತಃ ಆರ್ಥೈಟೀಸ್ ಸಮಸ್ಯೆಗೆ ತುತ್ತಾಗಿದ್ದೆ. ಈ ಸಂದರ್ಭದಲ್ಲಿ ನೋನಿ ಹಣ್ಣಿನ ಪರಿಚಯವಾಗಿ ನನ್ನ ಸಮಸ್ಯೆಗೆ ಪರಿಹಾರ ದೊರೆಯಿತು. ನನಗೆ ಆದ ಅನುಕೂಲ ಜನರಿಗೂ ಆಗಬೇಕೆಂಬ ಕಾರಣಕ್ಕೆ ಅಮೃತ್ ನೋನಿ ಉದ್ಯಮವನ್ನು ಆರಂಭಿಸಿದ್ದು, ಇಂದು ಲಕ್ಷಾಂತರ ಜನರ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ.
-ನಾರಾಯಣ, ಮಾರ್ಕೆಟಿಂಗ್ ವಿಭಾಗದ ಸಿಇಓ
ಅಮೃತ್ ನೋನಿ ಸಂಸ್ಥೆ ಕೇವಲ ಉತ್ಪನ್ನಗಳನ್ನು ಮಾರಾಟ ಮಾಡುವುದಷ್ಟೇ ಗುರಿಯಾಗಿಸಿಕೊಳ್ಳದೆ ಇದರಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನದ ಮಾಹಿತಿಯನ್ನು ಸತ್ಯಶುದ್ಧವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ.