ವರ್ಷಧಾರೆಯಲ್ಲಿ ಕರಗದ ಹರ್ಷ; ಮಳೆಯ ನಡುವೆಯೂ ಭಕ್ತಿಯ ಹೊಳೆ..

Karaga
Published on

ಬೆಂಗಳೂರು: ರಾಜಧಾನಿಯಲ್ಲಿಂದು ವರುಣನ ಅಬ್ಬರ, ವರ್ಷಧಾರೆಯ ನಡುವೆಯೂ ಕರಗದ ಹರ್ಷ ಮೇಳೈಸಿದ್ದು, ಮಳೆಯ ಮಧ್ಯೆಯೇ ಭಕ್ತರ ದಂಡು ಹೊಳೆಯಾಗಿ ಹರಿದಂತೆ ಭಾಸವಾಗಿದ್ದು, ಭಕ್ತರ ಸಂಭ್ರಮದ ಮೆರುಗು ಈ ಬೆಳದಿಂಗಳ ಹೊಳಪನ್ನು ಹೆಚ್ಚಿಸಿದೆ.

ಶುಭಕೃತು ನಾಮ ಸಂವತ್ಸರದ ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಮಲ್ಲಿಗೆಯ ಕಂಪಿನ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಇಂದು ಧರ್ಮರಾಯ ದೇವಸ್ಥಾನದಿಂದ ಹೊರಟಿದ್ದು, ಅಸಂಖ್ಯಾತ ಭಕ್ತರೂ ಇದರಲ್ಲಿ ತೊಡಗಿಕೊಂಡಿದ್ದಾರೆ.

ಮಳೆಯ ನಡುವೆಯೂ ದೇವಾಲಯದಲ್ಲಿ ಹೋಮ ಹವನ ಸೇರಿ ಧಾರ್ಮಿಕ ವಿಧಿ-ವಿಧಾನಗಳು, ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಮೇಳಗಳ ಮೊಳಗುವಿಕೆಯೊಂದಿಗೆ ಸಾಂಗವಾಗಿ ನಡೆಯುತ್ತಿದ್ದು, ಕರಗ ಮಹೋತ್ಸವ ನೆರವೇರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net