ಟರ್ಮಿನಲ್​-2ರಲ್ಲಿ ಆ.31ರಿಂದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ

KIA
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರ್ಟಮಿನಲ್​-2ರಿಂದ ಅಂತಾರಾಷ್ಟ್ರೀಯ ವಿಮಾನಗಳು 31ರಿಂದ ಹಾರಾಟ ನಡೆಸಲಿವೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕಳೆದ ಜ. 15ರಿಂದ ಈ ರ್ಟಮಿನಲ್​ ಕಾರ್ಯಾಚರಣೆ ನಡೆಸುತ್ತಿದೆ. 31ರಂದು ಬೆಳಗ್ಗೆ 10.45ರಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಆಗಮನ ಮತ್ತು ನಿರ್ಗಮನ ರ್ಟಮಿನಲ್​-2 ಮೂಲಕ ನಡೆಯಲಿದೆ.

ಪ್ರಸ್ತುತ ಈ ರ್ಟಮಿನಲ್​ನಲ್ಲಿ ಏರ್​ ಏಷಿಯಾ, ಇಂಡಿಯಾ, ವಿಸ್ತಾರ, ಸ್ಟಾರ್​ ಏರ್​ ಸಂಸ್ಥೆಗಳ ದೇಶೀಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಅದರ ಜತೆಗೆ ಏರ್​ ಇಂಡಿಯಾದ ದೇಶೀಯ ವಿಮಾನಗಳು ಕೂಡ ರ್ಟಮಿನಲ್​-2 ಮೂಲಕ ಕಾರ್ಯನಿರ್ವಹಿಸಲಿವೆ. ಹೆಚ್ಚಿನ ಮಾಹಿತಿಗೆ ದೂ: 080 22012001, 6678 5555 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net