

ಬೆಳ್ತಂಗಡಿ: ದುಶ್ಚಟಕ್ಕೆ ಬಲಿಯಾದವರು ತನ್ನ ಕುಟುಂಬಕ್ಕೆ ಪ್ರೀತಿ ತೋರಿಸುವ ಮತ್ತು ಹಣ ಖರ್ಚು ಮಾಡುವ ಬದಲು ತನ್ನ ಸ್ನೇಹಿತರಿಗೆ ಹೆಚ್ಚು ಪ್ರೀತಿ ಮಾಡುತ್ತಾರೆ ಮತ್ತು ಖರ್ಚು ಮಾಡುತ್ತಾರೆ. ಕುಡಿತದಿಂದ ಆರೋಗ್ಯ ಹಾಳಾಗುವುದರೊಂದಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆ ಲೈಾಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 245ನೇ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜನಜಾಗೃತಿ ಪ್ರಾದೇಶಿಕ ವಿಭಾಗ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಧರ್ಮಾಧಿಕಾರಿ ಕಚೇರಿ ಪ್ರಬಂಧಕ ರಾಜೇಂದ್ರದಾಸ್, ವೇದಿಕೆಯ ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ನಂದಕುಮಾರ್, ರಮೇಶ್, ದಿನೇಶ್ ಮರಾಠಿ, ನಾಗೇಂದ್ರ ಮತ್ತು ಆರೋಗ್ಯ ಸಹಾಯಕಿ ಪ್ರೆಸಿಲ್ಲಾ ಡಿಸೋಜ, ನೇತ್ರಾವತಿ ಹಾಗೂ ಜಯಲಕ್ಷ್ಮೀ, ಆಪ್ತಸಮಾಲೋಚಕ ಜಿ.ಆರ್.ಮಧು ಮತ್ತು ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರ ಏ.21ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.