

ಬಂಟ್ವಾಳ: ಕ್ರೀಡೆಯಿಂದ ಸೌಹಾರ್ದ ಸಾಧ್ಯ. ಎಲ್ಲರೂ ಜತೆಯಾಗಿ ಪ್ರೀತಿ ವಿಶ್ವಾಸದಿಂದ ಬಾಳಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸದಾಶಿವ ಡಿ.ತುಂಬೆ ತಿಳಿಸಿದರು.
ತುಂಬೆ ಗ್ರಾಮದ ಮುದಲ್ಮೆ ಪಡ್ಪುವಿನಲ್ಲಿ ಭಾನುವಾರ ಬ್ರದರ್ಸ್ ಪಡ್ಪು ವತಿಯಿಂದ 2ನೇ ಆವೃತ್ತಿಯ ಪಡ್ಪು ಪ್ರೀಮಿಯರ್ ಲೀಗ್-2025 ಕ್ರಿಕೆಟ್ ಟೂರ್ನಿ ಮತ್ತು ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಕಾಶ್ ಕುಂಪಲ, ಗಣೇಶ್ ಸುವರ್ಣ ತುಂಬೆ, ಪ್ರವೀಣ್ ಬಿ. ತುಂಬೆ, ಗಣೇಶ್ ಸಾಲಿಯಾನ್, ಕಬೀರ್, ಜಲಜಾಕ್ಷಿ ವಿ. ಕೋಟ್ಯಾನ್, ದೇವಿಪ್ರಸಾದ್ ಎಂ. ದೇವಂದಬೆಟ್ಟು, ಅನಂತವಿಜಯ್ ಕೆ., ಶರುಣ್ ಕುಮಾರ್, ಸಜಿತ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು. ಸುಶಾನ್ ಆಚಾರ್ಯ ಸ್ವಾಗತಿಸಿದರು. ಲೋಯಲ್ ಲಯನ್ಸ್ ವಿನ್ನರ್ಸ್, ಯುನೈಟೆಡ್ ಬ್ರದರ್ಸ್ ರನ್ನರ್ಸ್ ಪ್ರಶಸ್ತಿ ಪಡೆದರು.