ದೂರ ದೃಷ್ಟಿತ್ವ ಅಭಿವೃದ್ಧಿಗೆ ಪೂರಕ: ಮೋಹನ್ ಕೋಟ್ಯಾನ್ ಹೇಳಿಕೆ

Mul_development
Published on

ಹಳೆಯಂಗಡಿ: ರಾಷ್ಟ್ರ ಕಂಡ ಅಪರೂಪದ ವ್ಯಕ್ತಿ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ದೂರ ದೃಷ್ಟಿತ್ವ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಹೇಳಿದರು.

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಗೌರವಾರ್ಥ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವತಿಯಿಂದ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಚ್.ವಸಂತ ಬೆರ್ನಾಡ್ ನುಡಿನಮನಗೈದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಕಾಂಗ್ರೆಸ್ ನಾಯಕರಾದ ಮಂಜುನಾಥ ಕಂಬಾರ, ಆಲ್ವಿನ್ ಡಿಕುನ್ನ, ಸುಬ್ರಹ್ಮಣ್ಯ ಭಟ್, ಧರ್ಮಾನಂದ ಶೆಟ್ಟಿಗಾರ, ಜನಾರ್ದನ ಬಂಗೇರ, ಮಹಾಬಲ ಸನಿಲ್, ಯೋಗೀಶ್ ಕೋಟ್ಯಾನ್, ನಿರಂಜಲನೀತು, ನೆಲ್ಸನ್ ಲೋಬೋ, ಪ್ರಕಾಶ್ ಆಚಾರ್ಯ, ಜಲಜಾ ಪಾಣರ, ಅದ್ದು ಅಂಗರಗುಡ್ಡೆ, ಅಶ್ವಿನಿ ಆಳ್ವ, ಅಬ್ದುಲ್ ಖಾದರ್, ಚಂದ್ರಶೇಖರ ಕಿನ್ನಿಗೋಳಿ, ರಿಚರ್ಡ್, ಬಶೀರ್ ಕುಳಾಯಿ, ಮನೀಶ್ ಪೂಜಾರಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net