

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಕಾಲನಿ ನಿವಾಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿ ಬಾಬು ಅವರಿಗೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು.
ಧರ್ಮಸ್ಥಳ ಯೋಜನೆಯ ನೂಜಿಬಾಳ್ತಿಲ ಒಕ್ಕೂಟ ಅಧ್ಯಕ್ಷ ಸುರೇಶ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈ ಭಾಗದಲ್ಲಿ ಅದೆಷ್ಟೋ ಕುಟುಂಬಗಳು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆಯ ವಿವಿಧ ಕಾರ್ಯಕ್ರಮಗಳನ್ನು ಈ ಭಾಗದಲ್ಲಿ ಅನುಷ್ಠಾನ ಮಾಡಲಾಗಿದ್ದು, ಇದೀಗ ವಾತ್ಸಲ್ಯ ಕಾರ್ಯಕ್ರಮದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದ್ದು, ಮನೆ ಮಂದಿಯ ಬಾಳಿಗೆ ಬೆಳಕಾಗುವ ಈ ಕಾರ್ಯಕ್ಕೆ ನಾವೆಲ್ಲ ಸಹಕರಿಸೋಣ ಎಂದರು.
ಕಟ್ಟಡ ನಿರ್ಮಾಣ ಕಾರ್ಮಿಕ ಪ್ರವೀಣ್ ಕುಮಾರ್ ದೀಪ ಬೆಳಗಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಸುಂದರಿ, ಕಾರ್ಯದರ್ಶಿ ಸುಶೀಲ ಕಲ್ಲುಗುಡ್ಡೆ, ಸದಸ್ಯರಾದ ಸೀತಾಕ್ಷಿ ಕಲ್ಲುಗುಡ್ಡೆ, ಉಮೇಶ್ ಸಾಂತ್ಯಡ್ಕ, ಶೌರ್ಯ ಕಡಬ ತಾಲೂಕು ಘಟಕದ ಸಂಯೋಜಕಿ ನಳಿನಿ ಪಿ, ಸದಸ್ಯರಾದ ಗಣೇಶ್, ಆನಂದ, ವೇಣುಗೋಪಾಲ ರೈ, ಹರೀಶ್, ಉಮೇಶ್, ಲಲಿತಾ, ಭವಾನಿ, ಮನೆಯವರಾದ ಸುಂದರ, ಪ್ರಮೀಳಾ, ಗುಲಾಬಿ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು. ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನೂಜಿಬಾಳ್ತಿಲ ಸೇವಾಪ್ರತಿನಿಧಿ ಅಪರ್ಣಾ ವಂದಿಸಿದರು.