

ಗುರುಪುರ: ವಾಮಂಜೂರಿನ ಹಿಂದು ಸೇವಾ ಸಮಾಜ ಶ್ರೀರಾಮ ಭಜನಾ ಮಂದಿರ ಟ್ರಸ್ಟ್‌ನಲ್ಲಿ ವಾರ್ಷಿಕ ಏಕಾಹ ಭಜನಾ ಮಹೋತ್ಸವ ಶನಿವಾರ ಪ್ರಾರಂಭವಾಯಿತು. ಡಿ.29ರಂದು ಬೆಳಗ್ಗೆ ಸೂರ್ಯೋದಯಕ್ಕೆ ಭಜನಾ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
ಪ್ರಮುಖರಾದ ಸುಬ್ರಹ್ಮಣ್ಯ ಭಟ್, ಆನಂದ ಶೆಟ್ಟಿಗಾರ, ಸಂತೋಷ್ ಕುಮಾರ್ ಶೆಟ್ಟಿ ಮೂಡುಶೆಡ್ಡೆ, ವಿಜೇತಾ ಅಮೀನ್, ಕಾರ್ಪೋರೇಟರ್ ಹೇಮಲತಾ ಆರ್.ಸಾಲ್ಯಾನ್, ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ಉಮೇಶ್ ಕೋಟ್ಯಾನ್ ವಾಮಂಜೂರು, ಬಾಲಕೃಷ್ಣ ಕೋಟ್ಯಾನ್, ನಾಗೋಜಿ ರಾವ್, ಸುಧಾಕರ ಭಟ್, ರಾಜೇಶ್ ಕೊಟ್ಟಾರಿ, ಜಗದೀಶ ಶೇಣವ, ಚಂದ್ರಹಾಸ ರೈ ವಾಮಂಜೂರು, ದಿನೇಶ್ ಜೆ.ಕರ್ಕೇರ, ದಿವಾಕರ ಆಚಾರ್ಯ ವಾಮಂಜೂರು, ರಾಜ್‌ಕುಮಾರ್ ಶೆಟ್ಟಿ ವಾಮಂಜೂರು, ನಾಗೇಶ್ ಕೋಟ್ಯಾನ್, ಶೇಖರ ಪೂಜಾರಿ, ಚಿತ್ತರಂಜನ್ ದಾಸ್ ಶೆಟ್ಟಿ, ಲೋಕೇಶ್ ಕುಲಾಲ್, ವಿನೋದಾ ಮತ್ತಿತರರಿದ್ದರು.