ವ್ಯವಸಾಯ ಉತ್ಪನ್ನ ಮಾರಾಟ ಸಂಘಕ್ಕೆ ರವೀಂದ್ರ ಭೇಟಿ

product
ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ಉಡುಪಿ ಇಲ್ಲಿಗೆ ಸಹಕಾರ ಸಂಘಗಳ ಅಪಾರ ನಿಬಂಧಕ ಜಿ.ಎಂ.ರವೀಂದ್ರ ಇವರು ಭೇಟಿ ನೀಡಿದರು
Published on

ಕೊಕ್ಕರ್ಣೆ: ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ಉಡುಪಿಗೆ ಸಹಕಾರ ಸಂಘಗಳ ಅಪರ ನಿಬಂಧಕ (ಬಳಕೆ ಮತ್ತು ಮಾರಾಟ) ಜಿ.ಎಂ.ರವೀಂದ್ರ ಅವರು ಭೇಟಿ ನೀಡಿ ಸಂಘದ ಪ್ರಗತಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ, ಉಡುಪಿ ಜಿಲ್ಲಾ ಸಹಕಾರಿ ಒಕ್ಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಸಂಘದ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ, ಉಪಾಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಕೊಡವೂರು, ನಿರ್ದೇಶಕರಾದ ಕೆ.ರವಿರಾಜ್ ಹೆಗ್ಡೆ ಕೊಡವೂರು, ಬಿ.ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ವೈ.ಸುಧೀರ್ ಕುಮಾರ್ ಪಡುಬಿದ್ರಿ, ಟಿ.ಸತೀಶ್ ಶೆಟ್ಟಿ ಕೆಮ್ಮಣ್ಣು, ಶ್ರೀಧರ್ ವಿ.ಶೆಟ್ಟಿ ಆರೂರು, ವೆಂಕಟಕೃಷ್ಣ ಗೋಳಿ ಎಂ.ಮೈರ್ಮಾಡಿ, ಕಾರ್ಯದರ್ಶಿ ವಿಜಯಶೀಲ ಹೆಗ್ಡೆ, ಸಹಕಾರ ಇಲಾಖಾ ಸಿಬ್ಬಂದಿ ಜಯಂತಿ ಮತ್ತು ರೋಹಿತ್ ಕೆ.ಆರ್. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net