ವಿದ್ಯಾರ್ಥಿ, ಶಿಕ್ಷಕರದು ಭಾವನಾತ್ಮಕ ಸಂಬಂಧ

students
ಕಂಡ್ಲೂರಿನ ರಾಮ್‌ಸನ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು
Published on

ಗಂಗೊಳ್ಳಿ: ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಭಾವನಾತ್ಮಕವಾದುದು. ವಿದ್ಯಾರ್ಥಿ ತನ್ನ ಬದುಕಿನಲ್ಲಿ ಎಷ್ಟೇ ದೊಡ್ಡ ಹಂತ ತಲುಪಿದರೂ ಶಿಕ್ಷಕರಿಗೆ ಅವರ ಮಕ್ಕಳಾಗಿಯೇ ಇರುತ್ತಾರೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಕಂಡ್ಲೂರಿನ ರಾಮ್‌ಸನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಪ್ರತಿಭಾ ಪುರಸ್ಕಾರ, ಪಾಲಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಯಿತು. ಬಸ್ ಪಾಸ್ ಪ್ರಾಯೋಜಕತ್ವ ವಹಿಸಿದ ಕಾವ್ರಾಡಿ ಗ್ರಾಪಂ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಎನ್‌ಎಂಎಂಎಸ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್ ಶೆಟ್ಟಿ, ಸದಸ್ಯರಾದ ದಿನೇಶ್ ಆಚಾರ್ಯ ಕಂಡ್ಲೂರು, ರಾಘವೇಂದ್ರ ಶೆಟ್ಟಿ ಕಲ್ಲೋಳಿ ಮನೆ, ಬೆಚ್ಚಳ್ಳಿ ಭೋಜು ಪೂಜಾರಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪೂಜಾರಿ, ಶಿಕ್ಷಕರಾದ ಗೋಪಾಲ ವಿಷ್ಣು ಭಟ್, ನಿತ್ಯಾನಂದ ಶೆಟ್ಟಿ ಹಳನಾಡು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುರೇಶ್ ಭಟ್ ಸ್ವಾಗತಿಸಿದರು. ಸಂತೋಷ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net