ಕುಂದಾಪುರ: ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದಿಂದ ಸೂರಿ ಶತಮಾನೋತ್ಸವ ಕಾರ್ಯಕ್ರಮ ಕುಂದಾಪುರ ಸಂಘ ಕಚೇರಿಯಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ಉದ್ಘಾಟಿಸಿದರು. ಗೌರವಾಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ತಾಲೂಕು ಅಧ್ಯಕ್ಷ ಗಣೇಶ್ ದಾಸ್, ಉಡುಪಿ ಜಿಲ್ಲಾ ವಿದ್ಯಾರ್ಥಿ ಸಂಘಟನೆ ಸಂಚಾಲಕಿ ಪಲ್ಲವಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ, ಉಪಾಧ್ಯಕ್ಷ ಕೃಷ್ಣ ಪೂಜಾರಿ, ಸುಧೀರ್ ಪೂಜಾರಿ, ರೆಹಮಾನ್, ರಾಜ ಬಿ.ಟಿ.ಆರ್., ಅನಂತ ಕುಲಾಲ್ ಮೊದಲಾವರಿದ್ದರು. ಸಂಘದ ಮುಖಂಡ ಶಶಿಕಾಂತ ಎಸ್.ಕೆ. ನಿರ್ವಹಿಸಿದರು.