ಅಘೋರೇಶ್ವರ ಮೆಲೋಡಿ ಗ್ರೂಪ್ ವಾರ್ಷಿಕೋತ್ಸವ

kota (1)
Published on

ಕೋಟ: ಇಲ್ಲಿನ ಶ್ರೀ ಅೋರೇಶ್ವರ ಮೆಲೋಡಿಸ್ ಗ್ರೂಪ್‌ನ 13ನೇ ವರ್ಷದ ವಾರ್ಷಿಕೋತ್ಸವ ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ಭಾನುವಾರ ನಡೆಯಿತು.

ಸಂಸ್ಥೆ ವತಿಯಿಂದ ಆಶ್ರಮದ ನಿವಾಸಿಗಳಿಗೆ ದಿನಸಿ ಸಾಮಗ್ರಿ, ಬಟ್ಟೆಗಳನ್ನು ನೀಡಲಾಯಿತು. ನೆರವು ಹಸ್ತಾಂತರಿಸಿ ಮಾತನಾಡಿದ ಸಾವಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಈ ಸಂಗೀತ ಸಂಸ್ಥೆ ಒಂದು ವರ್ಷದಲ್ಲಿ ಸಂಪಾದಿಸಿದ ಅದರ ಅರ್ಧ ಭಾಗ ಒಳ್ಳೆಯ ಕೆಲಸಕ್ಕೆ ವಿನಿಯೋಗಿಸುತ್ತಿರುವುದು ಶ್ಲಾನೀಯ ಎಂದರು.

ಸಂಸ್ಥೆ ಸಂಸ್ಥಾಪಕ ರವಿ ಬನ್ನಾಡಿ ವಾತನಾಡಿದರು. ವಕೀಲ ಟಿ.ಮಂಜುನಾಥ್ ಗಿಳಿಯಾರು ಸಂಸ್ಥೆಯ ಗಾಯಕರಿಗೆ ಐಡೆಂಟಿ ಕಾರ್ಡ್‌ನ್ನು ವಿತರಿಸಿದರು.

ಗುತ್ತಿಗೆದಾರ ವಾಧವ್ ಪೂಜಾರಿ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ಯೋಗೀಶ್ ಕುವಾರ್, ಕೋಟ ಸಿಎ ಬ್ಯಾಂಕ್‌ನ ನಿರ್ದೇಶಕ ರಂಜಿತ್ ಕುವಾರ ಬಾರಿಕೆರೆ, ಹೊಸಬದುಕು ಆಶ್ರಮ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಉಪಸ್ಥಿತರಿದ್ದರು.

ಸುಜಾತ ಎನ್.ಕುಂದರ್ ಸ್ವಾಗತಿಸಿದರು. ಶಿಕ್ಷಕ ನಾಗೇಂದ್ರ ಆಚಾರ್ಯ ಚಿತ್ರಪಾಡಿ ನಿರೂಪಿಸಿದರು. ಸಂಜನಾ ಸೌಂಡ್ಸ್ ಆ್ಯಂಡ್ ಲೈಟ್ಸ್ ಕೋಟ ಪಡುಕೆರೆ ಸಹಕರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net