ಮಗಳಿಗೆ ಬೆಳ್ಳಿ ತೊಟ್ಟಿಲಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿಸಿದ ನಟಿ ಕಾವ್ಯಾ ಗೌಡ

kavya gowda
Published on

ಬೆಂಗಳೂರು: ‘ರಾಧಾ ರಮಣ’ ಸೀರಿಯಲ್​ ಖ್ಯಾತಿಯ ನಟಿ ಕಾವ್ಯ ಗೌಡ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆ ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ನಟಿ ಮುದ್ದಾದ ಹೆಣ್ಣು ಮಗುವಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದಾರೆ.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನದಂದು.. ಅಂದ್ರೆ 2024  ಜನವರಿ 22ರಂದು ಹೆಣ್ಣು ಮಗುವಿಗೆ ಕಾವ್ಯ ಗೌಡ ಜನ್ಮ ನೀಡಿದರು. ಮಗು ಹುಟ್ಟಿದ 11 ದಿನಗಳಿಗೆ ಸರಿಯಾಗಿ ತೊಟ್ಟಿಲು ಶಾಸ್ತ್ರವನ್ನ ಕಾವ್ಯ ಗೌಡ - ಸೋಮಶೇಖರ್ ದಂಪತಿ ನೆರವೇರಿಸಿದ್ದಾರೆ.

kavya gowda

ಫೆಬ್ರವರಿ 1 ರಂದು ತಮ್ಮ ನಿವಾಸದಲ್ಲೇ ಮಗಳಿಗೆ ತೊಟ್ಟಿಲು ಶಾಸ್ತ್ರವನ್ನ ಕಾವ್ಯ ಗೌಡ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ತೊಟ್ಟಿಲು ಶಾಸ್ತ್ರದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿವೆ.

kavya gowda
kavya gowda

ಬೆಳ್ಳಿ ತೊಟ್ಟಿಲಲ್ಲಿ ಮಗಳನ್ನು ಮಲಗಿಸಿ, ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿದ್ದಾರೆ. ಮಗಳ ಆಗಮನದಿಂದ ಕಾವ್ಯ ಗೌಡ - ಸೋಮಶೇಖರ್‌ ದಂಪತಿ ಖುಷಿ ಖುಷಿಯಾಗಿದ್ದಾರೆ. ತೊಟ್ಟಿಲು ಶಾಸ್ತ್ರದ ದಿನದಂದೇ ಕಾವ್ಯ ಗೌಡ ಮಗಳ ಪುಟಾಣಿ ಕಾಲುಗಳಿಗೆ ಕಾಲಂದುಗೆ ತೊಡಿಸಲಾಗಿದೆ.

‘ಗಾಂಧಾರಿ’, ‘ರಾಧಾ ರಮಣ’, ‘ಶುಭ ವಿವಾಹ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದ ನಟಿ ಕಾವ್ಯ ಗೌಡ. 2021ರಲ್ಲಿ ಉದ್ಯಮಿ ಸೋಮಶೇಖರ್ ಅವರನ್ನ ಕಾವ್ಯ ಗೌಡ ಮದುವೆಯಾದರು. ಇದೀಗ ಮುದ್ದಾದ ಹೆಣ್ಣು ಮಗುವಿಗೆ ನಟಿ ಕಾವ್ಯ ಗೌಡ ತಾಯಿಯಾಗಿದ್ದಾರೆ. ಮದುವೆಯಾದ ಬಳಿಕ ನಟನೆಯಿಂದ ಕಾವ್ಯ ಗೌಡ ಬ್ರೇಕ್ ಪಡೆದರು. ಇದೀಗ ಮಗುವಿನ ಲಾಲನೆ ಪಾಲನೆಯಲ್ಲಿ ಕಾವ್ಯ ಗೌಡ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net