ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾ ಗೌಡ

kavya gowda
Published on

ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಾಮಮಂದಿರ ಉದ್ಘಾಟನೆಯಾದ ದಿನವೇ ಕಾವ್ಯಾ ಗೌಡ ಅವರ ಮನೆಗೆ ಸೀತೆಯ ಆಗಮನವಾಗಿದೆ. ನಮ್ಮ ಪುಟ್ಟ ಮಗುವಿನ ಆಗಮನವಾಗಿರುವ ಸುದ್ದಿ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ತಾಯಿ ಮಗುವ ಇಬ್ಬರೂ ಆರಾಮವಾಗಿದ್ದೇವೆ. ಈ ವಿಶೇಷ ಪ್ರಯಾಣದ ಹಾದಿಯಲ್ಲಿ ಹಾರೈಸಿದ, ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದ ಎಂದು ಕಾವ್ಯಾ ಗೌಡ ತನ್ನ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್‌ ಹಾಕಿದ್ದಾರೆ.

kavya gowda

2021ರ ಡಿಸೆಂಬರ್‌ 2ರಂದು ಕಾವ್ಯಾ ಗೌಡ ಮತ್ತು ಸೋಮಶೇಖರ್‌ ಜೋಡಿ ವಿವಾಹವಾಗಿದ್ದರು. ಇದೀಗ ರಾಮ ಜನ್ಮಭೂಮಿಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ದಿನದಂದೇ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ.

kavya gowda

ಕಾವ್ಯಾ ಗೌಡ ಅವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ರಾಧಾ ರಮಣ, ಶುಭ ವಿವಾಹ, ಗಾಂಧಾರಿ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಾವ್ಯಾ ಗೌಡಾ  ಅಕ್ಕ ಭವ್ಯ ಗೌಡ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾವು ಮಗುವಿನ ನಿರೀಕ್ಷೆಯಲ್ಲಿರುವ ಮಾಹಿತಿಯನ್ನು ಇವರು ಕೂಡ ಹಂಚಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net