ಮೈ ಚಳಿ ಬಿಟ್ಟು ಕುಣಿದ ನೋರಾ ಫತೇಹಿ; ಪಡ್ಡೆ ಹುಡುಗರು ಕ್ಲೀನ್​ ಬೋಲ್ಡ್​​

Nora Fatehi
Published on

ಮುಂಬೈ: ಬಾಲಿವುಡ್​​ ನಟಿ ನೋರಾ ಫತೇಹಿ ಬಾಲಿವುಡ್​​ನಲ್ಲಿ ಐಟಂ ಸಾಂಗ್​ ಹೆಜ್ಜೆ ಹಾಕುವ ಮೂಲಕವಾಗಿ ಜನಮನ್ನಣೆ ಗಳಿಸಿದ್ದಾರೆ. ಬಾಲಿವುಡ್‌ನ ಬೆಲ್ಲಿ ಡ್ಯಾನ್ಸ್‌ ಕ್ವೀನ್ ನೋರಾ ಫತೇಹಿ ಕಾರ್ಯಕ್ರವೊಂದರ ವೇದಿಕೆ ಮೇಲೆ ಹಾಟ್​​ ಡಾನ್ಸ್​​ ಮಾಡುವ ಮೂಲಕವಾಗಿ ಇಂದಿನ ಹಾಟ್​ ಟಾಫಿಕ್​​ ಆಗಿದ್ದಾರೆ.

ನೂರ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಪ್ಲಸ್ 'ನಲ್ಲಿ ಕಾಣಿಸಿಕೊಂಡರು. ಈ ವೇಳೆ ನಟಿ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ. ನಟಿಯ ಈ ಮಾದಕ ಡಾನ್ಸ್​​ಗೆ ಪಡ್ಡೆ ಹುಡುಗರು ಕ್ಲೀನ್​​ ಬೋಲ್ಡ್​​ ಆಗಿದ್ದಾರೆ.  ಕೆಲವು ನಟಿ ಡಾನ್ಸ್​​ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೆಮೋ ಡಿಸೋಜಾ, ಶಕ್ತಿ ಮೋಹನ್, ಪುನಿತ್ ಪಾಠಕ್ ಮತ್ತು ರಾಘವ್ ಜುಯಲ್ ತೀರ್ಪುಗಾರರಾಗಿರುವ ಈ ಶೋದಲ್ಲಿ ನೋರಾ ಅಶ್ಲೀಲ ಡ್ಯಾನ್ಸ್ ಮೂವ್ಸ್ ತೋರಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ದೇಹಕ್ಕೆ ಅಂಟಿಕೊಂಡ ಮೆಟಾಲಿಕ್ ಡ್ರೆಸ್‌ನಲ್ಲಿ  ನೋರಾ ಫತೇಹಿ ತನ್ನ ಹಾಡಿನ ನಾಚ್ ಮೇರಿ ರಾಣಿ ಸಾಂಗ್​ಗೆ ವೇದಿಕೆಯ ಪ್ರದರ್ಶನ ನೀಡಿದ್ದಾರೆ. ತನ್ನ ಸೊಂಟದ ಮೇಲೆ ನೀರನ್ನು ಸುರಿದುಕೊಳ್ಳುತ್ತಾ ವೇದಿಕೆಯ ಕಡೆ ತಿರುಗಿದಳು. ನೋರಾಳ ಈ ಸ್ಟೆಪ್‌ಗೆ ಅಲ್ಲಿದ್ದವರೆಲ್ಲ ಏದುಸಿರು ಬಿಡುವಂತೆ ಮಾಡಿದೆ.

ಅಶ್ಲೀಲ ಡ್ಯಾನ್ಸ್ ಮೂವ್ಸ್‌ನಿಂದಾಗಿ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಕುಟುಂಬ ನೋಡುವಂಥ ಶೋನಲ್ಲಿ ಹೇಗಿರಬೇಕು ಎಂಬ ಸೆನ್ಸ್ ಇಲ್ಲ ಎಂದು ನೆಟ್ಟಿಗರು ಬೈಯ್ಯುತ್ತಿದ್ದಾರೆ. ಆದ್ರೆ ಈ ಡಾನ್ಸ್​​ ಪಡ್ಡೆ ಹುಡುಗರ ನಿದ್ದೆ ಕೆಡೆಸಿದ್ದಂತೂ ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net