More

    ವಿದ್ಯುತ್ ಶಾಕ್ ನೀಡಿ ಕುಡಿತದ ಚಟ ಬಿಡಿಸ್ತಾರೆ!; ನಂತ್ರ ಒಂದು ಪೆಗ್ ಹಾಕೋಕು ಭಯವಾಗುತ್ತೆ..

    ಉತ್ತರಪ್ರದೇಶದ : ಮದ್ಯದ ಗೀಳು ಅಥವಾ ಮದ್ಯಪಾನದ ವ್ಯಸನವೆಂದರೆ ಮದ್ಯದ ಮೇಲಿನ ಅವಲಂಬನೆ ,ಇದು  ಚಟವಾಗಿಸುತ್ತದೆ. ಇದರಿಂದಾಗಿ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಂಡು ಮದ್ಯಪಾನದಿಂದಾಗಿ ತನ್ನ ಆರೋಗ್ಯ,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿಕೊಳ್ಳುತ್ತಾನೆ. ಮದ್ಯಕ್ಕೆ ದಾಸರಾಗಿ ಜೀವ, ಜೀವನ, ಕುಟುಂಬವನ್ನು ಕಳೆದುಕೊಂಡಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ನಾವಿಂದು ಮದ್ಯ ಚಟದಿಂದ ಮುಕ್ತಿ ಪಡೆಯಲು ನೀಡುತ್ತಿರುವ ವಿಶೇಷ ಚಿಕಿತ್ಸೆ ಕುರಿತಾಗಿ ತಿಳಿದುಕೊಳ್ಳೋಣ…

    ಸಂಶೋಧನೆ ಪ್ರಕಾರ, ಶ್ರೀಮಂತರಿಗಿಂತ ಬಡವರು ಹಾಗೂ ಮದ್ಯವಯಸ್ಸಿನ ಜನರು ಹೆಚ್ಚು ಮದ್ಯಪಾನ ಮಾಡ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ.
    ಆಲ್ಕೋಹಾಲ್ ಸೇವನೆ ಅನೇಕ ಗಂಭೀರ ರೋಗಕ್ಕೆ ಕಾರಣವಾಗ್ತಿದೆ. ಮದ್ಯಪಾನ ವ್ಯಸನದಿಂದ ಹೊರಗೆ ತರಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. 

    ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವೈದ್ಯರೊಬ್ಬರು ಗಮನ ಸೆಳೆದಿದ್ದಾರೆ. ಮದ್ಯದ ಚಟದಿಂದ ಮುಕ್ತಿ ಹೊಂದಲು ಬಯಸುವ ಜನರಿಗೆ ಅವರು ನೀಡ್ತಿರುವ ಚಿಕಿತ್ಸೆ ಅಚ್ಚರಿ ಹುಟ್ಟಿಸುವಂತಿದೆ.

    ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಡಾ.ಅಮಿತ್ ಆರ್ಯ ಪ್ರಕಾರ, ಮೆದುಳು ವಿದ್ಯುತ್ ಅಂಗವಾಗಿದ್ದು, ವಿದ್ಯುತ್ ಸಂಕೇತಗಳನ್ನು ರವಾನಿಸುತ್ತದೆ. ಈ ಸಿಗ್ನಲ್ ನಲ್ಲಿ ಏನಾದರೂ ತೊಂದರೆಯಾದರೆ, ಆ ವ್ಯಕ್ತಿ ಯಾವುದಾದ್ರೂ ಒಂದು ಚಟಕ್ಕೆ ಬಿದ್ದು ಒತ್ತಡಕ್ಕೆ  ಒಳಗಾಗುತ್ತಾರೆ. ಮೆದುಳಿನ ಕೆಲವು ಭಾಗಗಳಿಗೆ ವಿದ್ಯುತ್ ಪ್ರವಾಹವನ್ನು ನೀಡುವ ಮೂಲಕ, ಈ ವಿದ್ಯುತ್ ಸಂಕೇತಗಳನ್ನು ಅವುಗಳ ಹಿಂದಿನ ಸ್ಥಿತಿಗೆ ತರಲಾಗುತ್ತದೆ. ಇದರಿಂದಾಗಿ ರೋಗಿಯು ಸಹಜ ಸ್ಥಿತಿಗೆ ಮರಳುತ್ತಾನೆ. ಅಲ್ಲದೆ ಅಂಟಿಕೊಂಡಿದ್ದ ಮದ್ಯದ ಚಟವನ್ನು ಬಿಡುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

    ಲಕ್ನೋ ದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಈ ಚಿಕಿತ್ಸೆ ನಡೆಯುತ್ತಿದೆ. ಈವರೆಗೆ ಹದಿನೇಳು ಮಂದಿಗೆ ಈ ಚಿಕಿತ್ಸೆ ಮೂಲಕ ಮದ್ಯವ್ಯಸನವನ್ನು ಬಿಡಿಸಲಾಗಿದೆ. ಇದನ್ನು ಟ್ರಾನ್ಸ್‌ಕ್ರೇನಿಯಲ್ ಡೈರೆಕ್ಟ್ ಕರೆಂಟ್ ಸ್ಟಿಮ್ಯುಲೇಶನ್ ಟೆಕ್ನಿಕ್ ಎಂದು ಕರೆಯಲಾಗುತ್ತಿದೆ. ಸಾಂಪ್ರದಾಯಿಕವಾಗಿ ಬಳಸಲಾಗುವ ಈ ಎಲೆಕ್ಟ್ರೋ ಥೆರಪಿಯಲ್ಲಿ, ರೋಗಿಯನ್ನು ಪ್ರಜ್ಞಾಹೀನಗೊಳಿಸಲಾಗುತ್ತದೆ, ನಂತರ ಅವನಿಗೆ ವಿದ್ಯುತ್ ಶಾಕ್  ನೀಡಲಾಗುತ್ತದೆ. ಮೊದಲು ಪ್ರಜ್ಞೆ ಇರುವಾಗ್ಲೆ ಕರೆಂಟ್ ಶಾಕ್ ನೀಡಲಾಗ್ತಾಯಿತ್ತು. ಅದನ್ನು ನಿಷೇಧಿಸಿದ ಕಾರಣ ಈಗ ಪ್ರಜ್ಞೆತಪ್ಪಿಸಿ ವಿದ್ಯುತ್ ಶಾಕ್ ನೀಡಲಾಗ್ತಾಯಿತ್ತು. ಮದ್ಯಪಾನಿಯ ಪ್ರಜ್ಞೆ ತಪ್ಪಿಸಿ ನಂತ್ರ ಅವರನ್ನು ಕುಳಿಸಿ, ತಲೆಯ ಕೆಲ ಭಾಗಗಳಿಗೆ ವಿಶೇಷ ಸಾಧನವನ್ನು ಅವಳಡಿಸಿ ಶಾಕ್ ನೀಡಲಾಗುತ್ತದೆ.

    ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಈವರೆಗೆ 34 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದೆ. ಇವರನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಮೊದಲ ಗುಂಪಿನ ರೋಗಿಗಳಿಗೆ ಕರೆಂಟ್ ನೀಡಲಾಯಿತು. ಅವರಿಗೆ ಒಂದು ವಾರದಲ್ಲಿ ಇಪ್ಪತ್ತು ನಿಮಿಷಗಳ, ಐದು ಸೆಷನ್ ನೀಡಿದ ನಂತ್ರ ವಿಶ್ಲೇಷಣೆ ಮಾಡಲಾಯ್ತು. ಮೊದಲ ಗುಂಪಿನ ಎಲ್ಲರೂ ಮದ್ಯಪಾನವನ್ನು ಬಿಟ್ಟಿದ್ದರು. ಕರೆಂಟ್ ಶಾಕ್ ನಿಂದ ಅವರಿಗೆ ಮತ್ತ್ಯಾವ ಸಮಸ್ಯೆಯೂ ಆಗಿರಲಿಲ್ಲ.

    ನಾಪತ್ತೆಯಾಗಿದ್ದ ಗಂಡ ಮಂಗಳಮುಖಿಯಾಗಿ ಮೈಸೂರಿನಲ್ಲಿ ಪತ್ತೆ; ಸುಳಿವು ಕೊಟ್ಟ ಬಿಗ್‌ಬಾಸ್10 ಸ್ಪರ್ಧಿ!

    ಪ್ರೀತಿಯೇ ಜೀವನ..ಆದರೆ ಪ್ರೇಮಿ ಹೆಂಡತಿಯಲ್ಲ!; ನೂರಕ್ಕೆ ನೂರರಷ್ಟು ಸತ್ಯ ಎಂದ್ರು ಬೆಂಗಳೂರಿಗರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts