

ತುಮಕೂರು: ಅಪರಾಧ ಪ್ರಕರಣದಲ್ಲಿ ನ್ಯಾಯಾಲಕ್ಕೆ ಕರೆತಂದಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ಗುರುವಾರ (ಫೆಬ್ರವರಿ 1) ವರದಿಯಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕು ಹುಲ್ಲುರು ಗ್ರಾಮದಲ್ಲಿ ಡಾನ್ಸ್ ಕೊರಿಯೋಗ್ರಾಫರ್ ಕೆಲಸ ಮಾಡುತ್ತಿದ್ದ ಸೈಯದ್ ಅಲಿ ಬಾಳಾಸಾಹೇಬ್ ನದಾಫ್(25) ತಪ್ಪಿಸಿಕೊಂಡಿರುವ ಆರೋಪಿ.
ಎಡಗೈ ಮೇಲೆ ಸಿರಿಗನ್ನಡಂ ಎನ್ನುವ ಅಚ್ಚೆ ಹಾಕಿ ಹಾಕಿಸಿದ್ದಾನೆ ಹಾಗೂ ಎಡಗೈ ಮುಂಭಾಗದಲ್ಲಿ ಸರ್ವ ಧರ್ಮದ ಚಿಹ್ನೆಗಳ ಗುರುತಿದೆ ಎಂದು ಪೊಲೀಸರು ಚಹರೆ ತಿಳಿಸಿದ್ದು ಎಲ್ಲಿಯಾದರೂ ಕಂಡುಬಂದರೆ ಮಾಹಿತಿ ನೀಡಲು ಕೋರಿದ್ದಾರೆ.