More

    ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ನಂ. 1: ಭಾರತಕ್ಕೆ ಎಷ್ಟನೇ ಸ್ಥಾನ?

    ನ್ಯೂಯಾರ್ಕ್​: 2024ರ ಯುಎಸ್ ನ್ಯೂಸ್ ಪವರ್ ಶ್ರೇಯಾಂಕಗಳ ಪ್ರಕಾರ ಯುನೈಟೆಡ್ ಸ್ಟೇಟ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಉಳಿದಿದೆ. ಚೀನಾ ತನ್ನ ಸ್ಥಾನ ಜಿಗಿತವನ್ನು ಮುಂದುವರೆಸಿದ್ದು, ತಾಂತ್ರಿಕ ಪ್ರಗತಿ ಮತ್ತು ಆರ್ಥಿಕ ಪ್ರಭಾವದಿಂದಾಗಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

    ನಾಯಕತ್ವ, ಆರ್ಥಿಕತೆ ಮತ್ತು ರಾಜಕೀಯ ಪ್ರಭಾವ, ಅಂತಾರಾಷ್ಟ್ರೀಯ ಸಂಬಂಧ ಮತ್ತು ಮಿಲಿಟರಿ ಶಕ್ತಿಯ ಆಧಾರದ ಮೇಲೆ ಶ್ರೇಯಾಂಕಗಳನ್ನು ಅಳೆಯಲಾಗುತ್ತದೆ. ತಂತ್ರಜ್ಞಾನ, ಹಣಕಾಸು ಮತ್ತು ಮನರಂಜನೆಯಂತಹ ವಿವಿಧ ಕ್ಷೇತ್ರಗಳಲ್ಲಿ ತನ್ನ ಬಲವಾದ ಕಾರ್ಯಕ್ಷಮತೆಯಿಂದಾಗಿ ಅಮೆರಿಕ ಮೊದಲ ಸ್ಥಾನ ಉಳಿಸಿಕೊಂಡಿದೆ, ಕೃತಕ ಬುದ್ಧಿಮತ್ತೆ ಮತ್ತು 5ಜಿ ಕ್ಷೇತ್ರದಲ್ಲಿ ಚೀನಾದ ತಾಂತ್ರಿಕ ಪರಾಕ್ರಮ ಮತ್ತು ವಿಸ್ತಾರಗೊಳ್ಳುತ್ತಿರುವ ಅದರ ಆರ್ಥಿಕ ಪ್ರಭಾವದಿಂದಾಗಿ ಈ ಪಟ್ಟಿಯಲ್ಲಿ ಚೀನಾ 2ನೇ ಸ್ಥಾನಕ್ಕೆ ಜಿಗಿದಿದೆ.

    ತನ್ನ ಭೌಗೋಳಿಕ ರಾಜಕೀಯ ಪ್ರಭಾವ ಮತ್ತು ಮಿಲಿಟರಿ ಶಕ್ತಿಗೆ ಹೆಸರುವಾಸಿಯಾಗಿರುವ ರಷ್ಯಾ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದು, ಜಾಗತಿಕ ವ್ಯವಹಾರಗಳನ್ನು ರೂಪಿಸುವಲ್ಲಿ ತನ್ನ ಪಾತ್ರವನ್ನು ಈ ಮೂಲಕ ಒತ್ತಿಹೇಳಿದೆ. ಹಸಿರು ಶಕ್ತಿ ಮತ್ತು ಡಿಜಿಟಲ್ ಪರ್ವತನೆಯಿಂದಾಗಿ ಜರ್ಮನಿಯು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

    ಬ್ರೆಕ್ಸಿಟ್ ನಂತರದ ಉದ್ಯಮಗಳು, ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ಉಪಕ್ರಮಗಳ ಮೇಲೆ ಹೆಚ್ಚು ಗಮನವನ್ನು ವಹಿಸಿರುವ ಯುನೈಟೆಡ್​ ಕಿಂಗ್​ಡಮ್​ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಐದನೇ ಮತ್ತು ಆರನೇ ಸ್ಥಾನಗಳನ್ನು ಪಡೆದುಕೊಂಡಿವೆ. ಫ್ರಾನ್ಸ್​ ದೇಶವು ಡಿಜಿಟಲೀಕರಣ ಮತ್ತು ಹಸಿರು ಶಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಇದು ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದ್ದು, ಯುರೋಪಿಯನ್ ಒಕ್ಕೂಟದ ಒಟ್ಟಾರೆ ಸ್ಥಿರತೆಗೆ ಕೊಡುಗೆ ನೀಡುತ್ತದೆ.

    ಚಿಪ್ ತಯಾರಿಕೆ, ಕೃತಕ ಬುದ್ಧಿಮತ್ತೆ ಮತ್ತು ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ಜಪಾನ್, ಎಂಟನೇ ಸ್ಥಾನದಲ್ಲಿದೆ. ನಾವೀನ್ಯತೆಯ ನಾಯಕನಾಗಿ ತನ್ನ ಸ್ಥಾನವನ್ನು ಜಾಗತಿಕವಾಗಿ ಗಟ್ಟಿಗೊಳಿಸುವ ಗುರಿಯನ್ನು ಜಪಾನ್​ ಹೊಂದಿದೆ. ಯುಎಸ್​ನ ಮಿತ್ರ ಮತ್ತು ಪ್ರಮುಖ ತೈಲ ಉತ್ಪಾದಕ ದೇಶ ಸೌದಿ ಅರೇಬಿಯಾ, ಒಂಬತ್ತನೇ ಸ್ಥಾನದಲ್ಲಿದೆ. ತನ್ನ ಬೃಹತ್ ತೈಲ ನಿಕ್ಷೇಪಗಳು ಮತ್ತು ಪ್ರವಾಸೋದ್ಯಮ, NEOM ಹಾಗೂ 2034 FIFA ವಿಶ್ವಕಪ್‌ನಂತಹ ಮೆಗಾ-ಪ್ರಾಜೆಕ್ಟ್‌ಗಳಲ್ಲಿ ಸೌದಿ ಹೂಡಿಕೆ ಮಾಡಿದೆ.

    ಭಾರತ ಮಹತ್ವದ ದಾಪುಗಾಲು
    ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನಕ್ಕೆ ಏರಿರುವುದು ಮಹತ್ವದ ಬೆಳವಣಿಗೆಯಾಗಿದೆ. ದೃಢವಾದ ಆರ್ಥಿಕತೆ, ಬಲವಾದ ಅಂತಾರಾಷ್ಟ್ರೀಯ ಸಂಬಂಧ ಮತ್ತು ಪ್ರಭಾವಶಾಲಿ ಮಿಲಿಟರಿ ಶಕ್ತಿಯು ಬೆಳೆಯುತ್ತಿರುವ ಭಾರತದ ಜಾಗತಿಕ ಸ್ಥಾನಮಾನಕ್ಕೆ ಕೊಡುಗೆ ನೀಡುತ್ತದೆ. ಗಮನಾರ್ಹ ಸಂಗತಿ ಏನೆಂದರೆ, ವಿಶ್ವ GDPಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಯುಎಸ್​, ಚೀನಾ, ಜಪಾನ್ ಮತ್ತು ಜರ್ಮನಿಯ ನಂತರದಲ್ಲಿ ಭಾರತವಿದೆ. (ಏಜೆನ್ಸೀಸ್​)

    ವೈವಾಹಿಕ ಜೀವನ ತೊರೆದ ಸಿತಾರಾ ಮದ್ವೆ ಅಂದ್ರೆ ಬೇಜಾರಾಗುವುದೇಕೆ? ನಟಿ ಕೊಟ್ಟ ಅಚ್ಚರಿಯ ಉತ್ತರ ಇಲ್ಲಿದೆ…

    ವಿವಾಹ ನೋಂದಣಿ ಮತ್ತಷ್ಟು ಜನಸ್ನೇಹಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts