More

    ವೈವಾಹಿಕ ಜೀವನ ತೊರೆದ ಸಿತಾರಾ ಮದ್ವೆ ಅಂದ್ರೆ ಬೇಜಾರಾಗುವುದೇಕೆ? ನಟಿ ಕೊಟ್ಟ ಅಚ್ಚರಿಯ ಉತ್ತರ ಇಲ್ಲಿದೆ…

    ಬೆಂಗಳೂರು: ನಟಿ ಸಿತಾರಾ ಬಗ್ಗೆ ಕನ್ನಡಿಗರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಸಾಹಸಸಿಂಹ ದಿ. ವಿಷ್ಣುವರ್ಧನ್​ ಅಭಿನಯದ ಹಾಲುಂಡ ತವರು ಸಿನಿಮಾದಿಂದ ದಿ. ಚಿರಂಜೀವಿ ಸರ್ಜಾ ನಟನೆಯ ಅಮ್ಮಾ ಐ ಲವ್ ಯು ವರೆಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರಲ್ಲೂ ಮನೆ ಮಾತಾಗಿದ್ದಾರೆ.

    ಕನ್ನಡದಲ್ಲಿ ಮೊದಲಿಗೆ ಅಭಿನಯಿಸಿದ ಹಾಲುಂಡ ತವರು ಸಿನಿಮಾದಲ್ಲಿ ಏಳು ಶಿವ… ಏಳು ಶಿವ… ಹಾಡು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಕರುಳಿನ ಕುಡಿ, ಬಂಗಾರದ ಕಳಸ, ಗಣೇಶನ ಗಲಾಟೆ, ನಾನು ನನ್ನ ಕನಸು, ಮಿ. ಐರಾವತ, ಚಕ್ರವ್ಯೂಹ, ಬೃಹಸ್ಪತಿ, ಬಕಾಸುರ ಮತ್ತು ಕೊನೆಯದಾಗಿ ಅಮ್ಮಾ ಐ ಲವ್​ ಯೂ ಸಿನಿಮಾದಲ್ಲಿ ಸಿತಾರಾ ನಟಿಸಿದ್ದಾರೆ. 80 ಮತ್ತು 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಇಂದಿಗೂ ಪೋಷಕ ಪಾತ್ರಗಳಲ್ಲಿ ಮಿಂಚು ಹರಿಸುತ್ತಿದ್ದಾರೆ.

    ಅಂದಹಾಗೆ ಸಿತಾರಾ ಅವರ ವಯಸ್ಸು 50. ಅವರ ವಯಸ್ಸಿನ ಬಹುತೇಕ ನಟಿಯರಿಗೆ ಮದುವೆಯಾಗಿ, ಮಕ್ಕಳಾಗಿ, ಮೊಮ್ಮಕ್ಕಳೂ ಇದ್ದಾರೆ. ಆದರೆ, ಸಿತಾರಾ ಮಾತ್ರ ಇನ್ನೂ ಮದುವೆಯಾಗಿಲ್ಲ. ಇಂದಿಗೂ ಏಕಾಂಗಿ ಜೀವನ ಸಾಗಿಸುತ್ತಿದ್ದಾರೆ. ಈ ನಿರ್ಧಾರ ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

    ಕೆಲವು ಮೂಲಗಳ ಪ್ರಕಾರ ಸಿತಾರಾ 90ರ ದಶಕದಲ್ಲಿ ಸಿನಿಮಾರಂಗದಲ್ಲಿ ಮುಂಚೂಣಿಯಲ್ಲಿದ್ದ ಓರ್ವ ನಟನನ್ನು ನಟಿ ಪ್ರೀತಿಸಿದ್ದರು ಎನ್ನಲಾಗಿದೆ. ಆದರೆ ಅವರು ಅಂದುಕೊಂಡಂತೆ ಮದುವೆಯಾಗಲು ಸಾಧ್ಯವಾಗಲಿಲ್ಲವಂತೆ. ಇದೇ ಕಾರಣಕ್ಕೆ ಮುಂದೆ ಮದುವೆಯಾಗಬಾರದು ಎಂದು ನಿರ್ಧರಿಸಿದರು ಎಂದು ಹೇಳಲಾಗುತ್ತದೆ. ಅಲ್ಲದೆ, ಮದುವೆ ಅಂದರೆ, ಬೇಸರ ವ್ಯಕ್ತಪಡಿಸುವ ಸಿತಾರಾ ಮದುವೆಯಾಗದಿರಲು ತಾವು ನೀಡುವ ಕಾರಣವೇ ಬೇರೆಯಾಗಿದೆ.

    ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಸಿತಾರಾ, ತಮ್ಮ ಏಕಾಂಗಿ ಜೀವನದ ಬಗ್ಗೆ ಸ್ಪಷ್ಟನೆ ನೀಡಿದರು. ನನಗೂ ಸಾಕಷ್ಟು ಮದುವೆ ಪ್ರಸ್ತಾಪಗಳು ಬಂದವು. ಆದರೆ, ನನ್ನ ಪಾಲಕರ ಕಾರಣದಿಂದಾಗಿ ನಾನು ಮದುವೆಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.

    ಸಿತಾರಾ ಅವರ ಪಾಲಕರು ವಿದ್ಯುತ್ ಮಂಡಳಿಯಲ್ಲಿ ಅಧಿಕಾರಿಗಳಾಗಿದ್ದರು. ತಂದೆ-ತಾಯಿಯ ಮೇಲೆ ಅಗಾಧವಾದ ಪ್ರೀತಿ ಇತ್ತು. ಅದರಲ್ಲೂ ನನ್ನ ತಂದೆ ಪರಮೇಶ್ವರನ್ ನಾಯರ್‌ ಅಂದರೆ ನನಗೆ ಪ್ರಾಣ. ತಂದೆ-ತಾಯಿಯನ್ನು ಬಿಟ್ಟು ಅವರಿಂದ ದೂರ ಉಳಿಯಲು ಇಷ್ಟವಿಲ್ಲದ ಕಾರಣ ನಾನು ಮದುವೆಯಾಗಲು ಯೋಚಿಸಲಿಲ್ಲ. ನನ್ನ ತಂದೆ ತೀರಿಕೊಂಡ ನಂತರ ಮದುವೆಯಾಗಿ ನೆಲೆಸುವ ಆಲೋಚನೆ ಸಂಪೂರ್ಣವಾಗಿ ಮರೆಯಾಯಿತು ಎಂದು ತಿಳಿಸಿದ್ದಾರೆ.

    ಒಂಟಿಯಾಗಿರುವುದು ಕೂಡ ತುಂಬಾ ಸಂತೋಷವಾಗಿದೆ ಮತ್ತು ನಾನು ಬ್ಯುಸಿಯಾಗಿರಲು ಸಾಕಷ್ಟು ಕೆಲಸವಿದೆ ಎಂದು ಸಿತಾರಾ ಹೇಳಿದರು. (ಏಜೆನ್ಸೀಸ್​)

    ನಿಮ್ಮ ಜೀವನ ಸರ್ವನಾಶವಾಗಲಿದೆ! ಬೆಂಗ್ಳೂರಿನ ನೋ ಪಾರ್ಕಿಂಗ್​ ಬೋರ್ಡ್​ ನೋಡಿ ವಾಹನ ಸವಾರರು ಶಾಕ್​

    ರಾಜ್ಯ ರೈಲ್ವೆ ಯೋಜನೆಗಳಿಗೆ ಬಂಪರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts