More

    ನಿಮ್ಮ ಜೀವನ ಸರ್ವನಾಶವಾಗಲಿದೆ! ಬೆಂಗ್ಳೂರಿನ ನೋ ಪಾರ್ಕಿಂಗ್​ ಬೋರ್ಡ್​ ನೋಡಿ ವಾಹನ ಸವಾರರು ಶಾಕ್​

    ಬೆಂಗಳೂರು: ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಅನೇಕರು ತಮ್ಮ ಮನೆಗಳ ಮುಂದೆ ಫಲಕಗಳನ್ನು ಹಾಕಿರುವುದನ್ನು ನೀವು ನೋಡಿರುತ್ತೀರಿ. ಈ ಫಲಕಗಳನ್ನು ನೋಡಿದರೂ ಕ್ಯಾರೆ ಎನ್ನದೆ ಕೆಲವರು ನಿರಾತಂಕವಾಗಿ ವಾಹನ ಪಾರ್ಕ್​ ಮಾಡುತ್ತಾರೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನ ಕಟ್ಟಡವೊಂದರ ಗ್ರಿಲ್ ಮೇಲೆ ಹಾಕಿರುವ ಫಲಕ ನೋಡಿದರೆ ಬೇರೆಯವರ ಮನೆ ಮುಂದೆ ಪಾರ್ಕ್​ ಮಾಡುವುದಕ್ಕೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ಅಲ್ಲದೆ, ಒಮ್ಮೆ ನಿಮ್ಮ ಮುಖದಲ್ಲಿ ನಗು ಮೂಡಿದರೂ ಅಚ್ಚರಿಪಡಬೇಕಿಲ್ಲ.

    ಕಾರು, ಆಟೋ ಮತ್ತು ಲಾರಿಗಳಂತಹ ಕೆಲವು ವಾಹನಗಳ ಹಿಂಭಾಗದಲ್ಲಿ ವಿವಿಧ ರೀತಿಯ ಬರಹಗಳನ್ನು ನಾವು ನೋಡಿದ್ದೇವೆ. ಅವುಗಳಲ್ಲಿ ಕೆಲವು ಎಚ್ಚರಿಕೆ ನೀಡುವ ಬರಹಗಳು ಸಹ ಇರುತ್ತವೆ. ಇನ್ನು ಕೆಲವು ಹಾಸ್ಯಮಯವಾಗಿದ್ದರೆ, ಕೆಲವು ಜೀವನದ ಸಂದೇಶವನ್ನು ಸಾರುತ್ತವೆ. ಇದೀಗ ಮಹಾನಗರಿ ಬೆಂಗಳೂರಿನ ನೋ ಪಾರ್ಕಿಂಗ್ ಬೋರ್ಟ್​​ಗಳಲ್ಲೂ ಕ್ರಿಯೇಟಿವಿಟಿಯನ್ನು ತೋರಿಸಲಾಗುತ್ತಿದೆ.

    ಬೆಂಗಳೂರಿನ ಕಟ್ಟಡವೊಂದರ ಗ್ರಿಲ್ಸ್​ಗೆ ಅಳವಡಿಸಿರುವ ನೋ ಪಾರ್ಕಿಂಗ್ ಬೋರ್ಡ್ ಮೇಲೆ ಏನು ಬರೆದಿದೆ ಎಂದು ತಿಳಿದರೆ ನಿಮ್ಮಿಂದ ನಗು ತಡೆದುಕೊಳ್ಳಲು ಆಗುವುದಿಲ್ಲ. ಪಾರ್ಕ್​ ಮಾಡುವವರಿಗೆ ಹಾಸ್ಯ ಚಟಾಕಿಗಳ ಜತೆ ಹಿಡಿಶಾಪಗಳನ್ನು ಬರೆದಿರುವ ಬೋರ್ಡ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಏನು ಬರೆದಿದೆ ಎಂದು ನೋಡೋಣ. ಪಾರ್ಕಿಂಗ್​ ನಿಷೇಧಿಸಲಾಗಿದೆ. ಒಂದು ವೇಳೆ ಪಾರ್ಕ್​ ಮಾಡಿದರೆ, ನಿಮಗೆ ಪೂರ್ವಜರ ಶಾಪ ತಟ್ಟಲಿದೆ. ಅಳಿಲುಗಳು ನಿಮ್ಮ ಮನೆಯ ಮೇಲೆ ದಾಳಿ ಮಾಡುತ್ತವೆ. ನಿಮ್ಮ ಜೀವನದಲ್ಲಿ ಎಲ್ಲವೂ ಕೆಟ್ಟ ದಿನಗಳು ಎದುರಾಗಲಿವೆ. ನಿಮ್ಮ ಫ್ರಿಡ್ಜ್‌ನಲ್ಲಿರುವ ಎಲ್ಲಾ ಆಹಾರಗಳು ಹಾಳಾಗುತ್ತವೆ. ನಿಮ್ಮ ವಾಹನವು ಇಲ್ಲದ ಶಬ್ದವನ್ನು ಮಾಡುತ್ತದೆ. ಹಗಲಿನಲ್ಲಿ ನಿಮ್ಮ ಟೈರ್‌ಗಳು ಪಂಕ್ಚರ್ ಆಗುತ್ತವೆ. ಸೊಳ್ಳೆಗಳು ನಿಮ್ಮ ಮೇಲೆ ದಾಳಿ ಮಾಡುತ್ತವೆ… ಹೀಗೆ ಶಾಪಗಳ ಪಟ್ಟಿ ದೊಡ್ಡದಿದೆ ಮತ್ತು ಕೊನೆಯಲ್ಲಿ ಎಚ್ಚರಿಕೆ ಎಂದು ಬರೆಯಲಾಗಿದೆ.

    ನೋ ಪಾರ್ಕಿಂಗ್ ಫಲಕ ಹಾಕುವುದರಲ್ಲಿ ತಪ್ಪೇನಿಲ್ಲ ಆದರೆ, ಇದರಲ್ಲೂ ಯೇಟಿವಿಟಿ ತೋರಿರುವುದಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಹೀಗೂ ಹಾಸ್ಯ ಮಾಡಬಹುದು ಎಂದಿದ್ದಾರೆ. ಈ ಹಿಂದೆಯೂ ಬೆಂಗಳೂರಿನಲ್ಲಿ ಇಂತಹದ್ದೇ ಬೋರ್ಡ್‌ಗಳು ಕಾಣಿಸಿಕೊಂಡಿದ್ದವು. ಕೋರಮಂಗಲ ಪ್ರದೇಶದಲ್ಲಿ ನೋ ಪಾರ್ಕಿಂಗ್ ಬೋರ್ಡ್​​ಗಳು ವೈರಲ್ ಆಗಿವೆ. ವಿಶೇಷವಾಗಿ ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಗಳ ಕುರಿತು ಈ ಫಲಕಗಳು ಗಮನಸೆಳೆದಿವೆ. ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಸಹ ನಡೆದಿದೆ. ಸದ್ಯ ಈ ನೋ ಪಾರ್ಕಿಂಗ್ ಬೋರ್ಡ್ ವೈರಲ್ ಆಗಿದೆ. (ಏಜೆನ್ಸೀಸ್​)

    ತೆರೆ ಮೇಲೆ ಮತ್ತೆ ಸಿಂಹ ಘರ್ಜನೆ; RSS ಕಾರ್ಯಕರ್ತನ ಪಾತ್ರದಲ್ಲಿ ಡಾ. ವಿಷ್ಣುವರ್ಧನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts