ವಿಧಾನಸೌಧ ಬಳಿ ಅಪಘಾತ, ಎಎಸ್ಐ ಸೇರಿ ನಾಲ್ವರಿಗೆ ಗಾಯ

accident
Published on

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧ ಬಳಿ ಗುರುವಾರ ಅಪಘಾತ ಸಂಭವಿಸಿದೆ.

ಸೆಕ್ಯುರಿಟಿ ಚೆಕ್ ಮಾಡುತ್ತಿದ್ದ ಪೊಲೀಸರ ಮೇಲೆ ಟಾಟಾ ಸುಮೋ ಕಾರು ನುಗ್ಗಿದ್ದು, ಒಬ್ಬ ಎಎಸ್ಐ ಸೇರಿ ನಾಲ್ವರು ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿರಿ video/ ಮರದ ಮೇಲೆ ಶವ ಇದೆಯೆಂದು ಬಂದ ಪೊಲೀಸರಿಗೆ ಕಾದಿತ್ತೊಂದು ಅಚ್ಚರಿ!

ವಿಧಾನಸೌಧ ಮುಂಭಾಗ ಹೈಕೋರ್ಟ್ ಗೇಟ್ ಬಳಿ ಕೃಷಿ ಇಲಾಖೆಗೆ ಸೇರಿದ ಟಾಟಾ ಸುಮೋ ಕಾರಿನ ಸ್ಟೇರಿಂಗ್ ಲಾಕ್ ಆಗಿ ಕಂಟ್ರೋಲ್ ಸಿಗದೆ ಅಪಘಾತ ಸಂಭವಿಸಿದೆ. ಪೊಲೀಸರಿಗೆ ಡಿಕ್ಕಿ ಹೊಡೆದ ಕಾರು ಬಳಿಕ ಕಾಂಪೌಂಡ್​ಗೆ ಗುದ್ದಿದೆ. ಪರಿಣಾಮ ಕರ್ತವ್ಯನಿರತ ಎಎಸ್ಐ ರಾಮು ಅವರ ಕಾಲು ಮುರಿದಿದೆ. ಮೂವರು ಮಹಿಳಾ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಸಂಭವಿಸಿದ‌ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಕೆಲ ಹೊತ್ತು ಪರದಾಡಬೇಕಾಯಿತು. ಘಟನೆ ನಡೆದು 3೦ ನಿಮಿಷದ ನಂತರ ಬಂದ ಆಂಬುಲೆನ್ಸ್​ ಮೂಲಕ ಗಾಯಳುಗಳನ್ನು ಆಸ್ಪತ್ರೆಗೆ ಕಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net