More

    video/ ಮರದ ಮೇಲೆ ಶವ ಇದೆಯೆಂದು ಬಂದ ಪೊಲೀಸರಿಗೆ ಕಾದಿತ್ತೊಂದು ಅಚ್ಚರಿ!

    ಕಲಬುರಗಿ: ‘ಎಣ್ಣೆ’ ಗಮ್ಮತ್ತು ಹೇಗೆಲ್ಲ ಆಡಿಸುತ್ತೆ ನೋಡಿ. ಮದ್ಯದ ನಶೆಯಲ್ಲಿದ್ದ ಕಡುಕನೊಬ್ಬ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಮರವೇರಿ ಸತ್ತಂತೆ ಮಲಗಿ ಹೈಡ್ರಾಮಾ ಸೃಷ್ಟಿಸಿದ್ದ.

    ಆಸ್ಪತ್ರೆ ಆವರಣದಲ್ಲಿನ ಮರ ಹತ್ತಿದ ವ್ಯಕ್ತಿಯೊಬ್ಬ ಅಲ್ಲೇ ಕುಡಿದು ಕೊಂಬೆ ಮೇಲೆಯೇ ಮಲಗಿದ್ದ. ಇದನ್ನು ಕಂಡ ಜನರು ಎಷ್ಟು ಜೋರಾಗಿ ಕೂಗಿದರೂ ಆತ ಎಚ್ಚರಗೊಂಡಿಲ್ಲ. ಮರದ ಮೇಲೆ ಶವ ಇದೆ ಅಂದುಕೊಂಡ ಸ್ಥಳೀಯರು ಗಾಬರಿಗೊಂಡಿದ್ದರು. ಇದನ್ನೂ ಓದಿರಿ ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

    ಜಿಮ್ಸ್ ಆಸ್ಪತ್ರೆ ಆವರಣಕ್ಕೆ ಭಾನುವಾರ ಮದ್ಯದ ಬಾಟಲಿ ಜತೆಗೆ ಬಂದ ವ್ಯಕ್ತಿಯೊಬ್ಬ ಅಲ್ಲಿನ ಮರವೊಂದನ್ನು ಹತ್ತಿದ್ದಾನೆ. ಮರದ ರೆಂಬೆ ಮೇಲೆಯೇ ಕುಳಿತು ಕುಡಿದಿದ್ದಾನೆ. ಇದಕ್ಕೂ ಮೊದಲೇ ಆತ ಸಾಕಷ್ಟು ಎಣ್ಣೆ ಕುಡಿದಿದ್ದ. ಅದರೊಂದಿಗೆ ಇನ್ನಷ್ಟು ಸೇರಿದ್ದರಿಂದ ನಶೆ ಹೆಚ್ಚಾಗಿ ಇಕ್ಕೆಲದ ರೆಂಬೆ ಮೇಲೆ ನಿದ್ರೆಗೆ ಜಾರಿದ್ದಾನೆ.
    ಸ್ವಲ್ಪವೂ ಅಲುಗಾಡದೆ ಮಲಗಿದ್ದನ್ನು ಗಮನಿಸಿದ ಜನರು ಯಾರೋ ಆತ್ಮಹತ್ಯೆ ಮಾಡಿಕೊಂಡಿರಬೇಕು, ಹೆಣವಿದೆ ಎಂದು ಭಾವಿಸಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ತಕ್ಷಣ ದೌಡಾಯಿಸಿದ ಪೊಲೀಸರು, ಮರವೇರಿ ನೋಡಿದಾಗ ಆತ ಸತ್ತಿಲ್ಲ, ಬದಲಿಗೆ ಮತ್ತೇರಿ ಮಲಗಿರುವುದು ಗೊತ್ತಾಯಿತು.

    ಇದನ್ನೂ ಓದಿರಿ ಗಂಡ-ಹೆಂಡ್ತಿ ಸಮಸ್ಯೆ ಬಗೆಹರಿಸಿ ಅಂದ್ರೆ ಪಲ್ಲಂಗಕ್ಕೆ ಕರೀತಾರೆ!

    ಬಳಿಕ ಜನರ ಸಹಕಾರದೊಂದಿಗೆ ಆತನನ್ನು ಕೆಳಗೆ ಜೋತು ಬೀಳುವಂತೆ ಮಾಡಿ, ಕೆಳಗಿದ್ದವರು ಹಿಡಿದು ಇಳಿಸಿಕೊಂಡರು. ಇದ್ಯಾವುದರ ಪರಿವೇ ಇಲ್ಲದೆ ಆತ ಮಾತ್ರ ಗುಂಡಿನ ಗಮ್ಮತ್ತಿನಲ್ಲೇ ತೇಲಾಡುತ್ತಿದ್ದ. ನಂತರ ವೈದ್ಯರು ಪರೀಕ್ಷೆ ನಡೆಸಿದ್ದು, ನಶೆಯಲ್ಲಿ ಇದ್ದುದ್ದರಿಂದ ಹೆಸರು, ವಿವರ ಪತ್ತೆಯಾಗಿಲ್ಲ. ಕುಡಿದ ಅಮಲಿನಲ್ಲಿ ಮರವೇರಿ ಸತ್ತಂತೆ ಮಲಗಿದ್ದ ವಿಡಿಯೋ ವೈರಲ್​ ಆಗಿದೆ.

    ಮರದ ಮೇಲಿರೋದು ಶವ ಅಲ್ಲ, ಇದು 'ಎಣ್ಣೆ' ಗಮ್ಮತ್ತು!

    ಮರದ ಮೇಲಿರೋದು ಶವ ಅಲ್ಲ, ಇದು 'ಎಣ್ಣೆ' ಗಮ್ಮತ್ತು!ಇಲ್ನೋಡಿ ಇದು ಕಲಬುರಗಿಯ ಜಿಮ್ಸ್ ಆಸ್ಪತ್ರೆ ಆವರಣ. ಈ ಮರದ ಮೇಲಿರೋದು ಶವ ಅಲ್ಲ. ಕುಡುಕನೊಬ್ಬ ಭಾನುವಾರ ಮದ್ಯದ ಅಮಲಿನಲ್ಲಿ ಮರವೇರಿ, ಅಲ್ಲೇ ಇನ್ನೊಂದು ಬಾಟಲಿ ಎಣ್ಣೆ ಕುಡಿದು ರಂಬೆ ಮೇಲೆ ಸತ್ತಂತೆ ಮಲಗಿದ್ದ. ಇದನ್ನು ಕಂಡ ಸ್ಥಳೀಯರು ಯಾರದ್ದೋ ಶವ ಎಂದುಕೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಆ ಕುಡುಕನನ್ನ ಕೆಳಗಿಳಿಸಲು ಪೊಲಿಸರು ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. #Drunkar #GymsHospital #Kalaburagi

    Posted by Vijayavani on Sunday, June 28, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts