video/ ಕರೊನಾ ಸೋಂಕಿನಿಂದ ಸತ್ತವನನ್ನು ಚೀಲದಲ್ಲಿ ಮುಚ್ಚಿದ್ರು!

corona dead body kgl
Published on

ತುಮಕೂರು: ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಅಂತ್ಯಸಂಸ್ಕಾರ ಮಾಡಿರುವ ವಿಡಿಯೋ ವೈರಲ್​ ಆಗಿದೆ.

ಕುಣಿಗಲ್ ತಾಲೂಕಿನ ತಿಮ್ಮೇಗೌಡನ ಪಾಳ್ಯದಲ್ಲಿ ಈ ಘಟನೆ ಸಂಭವಿಸಿದೆ. ಮನೆಯಲ್ಲೇ 60 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಮೃತರ ಗಂಟಲು ದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಇದನ್ನೂ ಓದಿರಿ video/ ಮರದ ಮೇಲೆ ಶವ ಇದೆಯೆಂದು ಬಂದ ಪೊಲೀಸರಿಗೆ ಕಾದಿತ್ತೊಂದು ಅಚ್ಚರಿ!

ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿಯು ವೃದ್ಧನ ಶವವನ್ನು ಪ್ಲಾಸ್ಟಿಕ್​ ಚೀಲಗಳಿಂದ ಮೃತದೇಹವನ್ನು ಪ್ಯಾಕ್ ಮಾಡಿದರು. ಯಾವುದೇ ಅಂತಿಮ ವಿಧಿವಿಧಾನವಿಲ್ಲದೆ ಅಂತ್ಯಸಂಸ್ಕಾರ‌ ನೆರವೇರಿತು. ಸಂಬಂಧಿಕರು ಸ್ವಲ್ಪ ದೂರದಲ್ಲೇ ನಿಂತಿದ್ದರು. ಕೆಲವರು ಶವದ ಬಳಿಯೂ ಬಂದು ಹೋದರು.

ಒಟ್ಟಿನಲ್ಲಿ ಕೋವಿಡ್​ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮೃತರ ಅಂತ್ಯಸಂಸ್ಕಾರದ ರೀತಿ-ನೀತಿಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಒಂದೇ ಗುಂಡಿಯಲ್ಲಿ 9 ಶವಗಳನ್ನು ಎಸೆದು ಮಣ್ಣು ಮಾಡಿದ್ದು, ಯಾದಗಿರಿಯಲ್ಲೂ ಶವವೊಂದನ್ನು ದರದರನೆ ಎಳೆತಂದು ಗುಂಡಿಗೆ ಬಿಸಾಕಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು.

ಪ್ರಾಣಿಗಿಂತ ಕಡೆಯಾಗಿ ಕರೊನಾ ಸೋಂಕಿತರ ಶವಸಂಸ್ಕಾರ ನಡೆಯುತ್ತಿರುವುದನ್ನ ಕಂಡ ಜನತೆ ಆತಂಕಗೊಂಡಿದ್ದಾರೆ. ಈಗ ಇಂತಹದ್ದೇ ಸಾಲಿಗೆ ತಿಮ್ಮೇಗೌಡನ ಪಾಳ್ಯದ ವೃದ್ಧನ ಶವಸಂಸ್ಕಾರವೂ ಸೇರಿದೆ. ಚೀಲಗಳಿಂದ ಶವ ಮುಚ್ಚಿದ ಪರಿ ಕಂಡು ಕುಟುಂಬಸ್ಥರಾದಿಯಾಗಿ, ಸ್ಥಳೀಯರೂ ಮರುಕಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net