ಕಾರ‌್ಯಕ್ರಮಗಳಿಂದ ಮೂಲ ಸಂಸ್ಕೃತಿಯ ಅನಾವರಣ : ವಿಂಧ್ಯಾ ಎಸ್.ರೈ ಅಭಿಮತ

04
Published on

ಬೆಳ್ತಂಗಡಿ: ಆಟಿ ತಿಂಗಳಲ್ಲಿ ಸಂಘಟನೆಗಳು ಇಂಥ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸಂಸ್ಕೃತಿ ಆಚಾರ ವಿಚಾರ ಪರಂಪರೆ ಮುಂದುವರಿಸಿಕೊಂಡು ಬರೋಣ ಎಂದು ಸಂಪನ್ಮೂಲ ವ್ಯಕ್ತಿ ವಿಂಧ್ಯಾ ಎಸ್.ರೈ ಹೇಳಿದರು.

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಬಂಟರ ಮಹಿಳಾ ಸಮಿತಿ ಮಡಂತ್ಯಾರು ವಲಯ ಆಶ್ರಯದಲ್ಲಿ ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾರದಾ ಮತ್ತು ವಿಠಲ್ ಶೆಟ್ಟಿ ದಂಪತಿ ಕಾರ್ಯಕ್ರಮ ಉದ್ಘಾಟಿಸಿದರು. ಮಡಂತ್ಯಾರು ವಲಯ ಬಂಟರ ಮಹಿಳಾ ಸಮಿತಿ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘ ಅಧ್ಯಕ್ಷ ಜಯಂತ್ ಶೆಟ್ಟಿ, ಮಡಂತ್ಯಾರು ವಲಯ ಬಂಟರ ಸಂಘ ಅಧ್ಯಕ್ಷ ಕೆ.ದಿವಾಕರ ಶೆಟ್ಟಿ, ಬೆಳ್ತಂಗಡಿ ತಾಲೂಕು ಮಹಿಳಾ ಬಂಟರ ಸಂಘ ಅಧ್ಯಕ್ಷೆ ಜಯಲಕ್ಷ್ಮೀ ಎಸ್.ಸಾಮಾನಿ, ದ.ಕ. ಬಂಟರ ಯಾನೆ ನಾಡವರ ಮಾತೃ ಸಂಘ ಸಂಚಾಲಕರಾದ ಎಂ.ಜಯರಾಮ ಭಂಡಾರಿ, ನಳಿನಿ ಎಂ.ಪೂಂಜ ಮಿಥಿಲಾ, ಪ್ರಮುಖರಾದ ಜಯರಾಮ ಶೆಟ್ಟಿ, ರಘುರಾಮ್ ಶೆಟ್ಟಿ, ಲಕ್ಷ್ಮೀಸಂಜೀವ ಶೆಟ್ಟಿ ಮುಗೆರೋಡಿ, ಪದ್ಮಾವತಿ ಆರ್.ಶೆಟ್ಟಿ ನೆತ್ತರ, ಸುರೇಶ್ ಶೆಟ್ಟಿ, ಸಂಗೀತಾ ಅರುಣ್ ಶೆಟ್ಟಿ ಉಪಸ್ಥಿತರಿದ್ದರು.

ರೇಖಾ ಶೆಟ್ಟಿ ಸ್ವಾಗತಿಸಿದರು. ಮಡಂತ್ಯಾರು ವಲಯ ಸಮಿತಿ ಸದಸ್ಯರು ಸಹಕರಿಸಿದರು. ಶಮಿತಾ ಶೆಟ್ಟಿ ನಿರೂಪಿಸಿದರು. ರಮ್ಯಾ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net