ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಸಹಾಯ : ಚೆನ್ನಪ್ಪ ಮೊಯ್ಲಿ ಕರೆ

New Project (34)
Published on

ಹಳೆಯಂಗಡಿ: ಗ್ರಾಮೀಣ ಸತ್ ಸಂಪ್ರದಾಯದ ಜತೆಗೆ ಪ್ರಾದೇಶಿಕ ಸಂಸ್ಕೃತಿಯನ್ನು ಯುವಜನರಿಗೆ ತಿಳಿಸಬೇಕು. ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ಉಡುಪಿ ಲೋಕೋಪಯೋಗಿ ಇಲಾಖೆ ನಿವೃತ್ತ ಎಇಇ ಚೆನ್ನಪ್ಪ ಮೊಯ್ಲಿ ಹೇಳಿದರು.

ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘ, ದೇವಾಡಿಗ ಮಹಿಳಾ ವೇದಿಕೆ, ದೇವಾಡಿಗ ಯುವ ವೇದಿಕೆ, ದೇವಾಡಿಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪಾವಂಜೆಯ ದೇವಾಡಿಗ ಭವನದಲ್ಲಿ ಭಾನುವಾರ ಆಟಿಡೊಂಜಿ ಐತಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಗಳೂರಿನ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ ಪ್ರಿಯಾ ಆಟಿದ ಮದಿಪು ನೀಡಿದರು. ಪಾವಂಜೆ ದೇವಾಡಿಗ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮೀ ಜನಾರ್ದನ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ಕಲ್ಮಾಡಿ ಬಗ್ಗು ಪಂಜುರ್ಲಿ ಕುಟುಂಬದ ಸುರೇಶ್ ಕೊಡವೂರು ಕಲ್ಮಾಡಿ, ಪ್ರಮುಖರಾದ ರವಿರಾಜ್, ಸಂಘದ ಕಟ್ಟಡ ಸಮಿತಿ ಕಾರ್ಯದರ್ಶಿ ಯಾದವ ದೇವಾಡಿಗ, ದೇವಾಡಿಗ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ತೋಕೂರು, ಉಪಾಧ್ಯಕ್ಷ ಜನಾರ್ದನ ಪಡು ಪಣಂಬೂರು, ವಿಠಲ ದೇವಾಡಿಗ ಅರಂದು ಮತ್ತಿತರರಿದ್ದರು.

ತುಳಸಿ ಸತೀಶ್ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು. ಜಯಶ್ರೀ ಯಾದವ್ ವಂದಿಸಿದರು. 32 ಬಗೆಯ ಆಟಿಯ ಖಾದ್ಯಗಳನ್ನು ಬಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net